ನೆನವಿಗೊಮ್ಮೆ ಹರಿನಾಮಘೋಷ ಮಾಡಿ ಜನುಮ ಸಾರ್ಥಕಾಗುವುದು ಪೂರ್ಣ ನೋಡಿ ಪ
ಜನವನ ದೊಳು ಹರಿಯ ಕೊಂಡಾಡಿ ಅನುಮಾನ ಹಿಡಿದು ಕೆಡಬ್ಯಾಡಿರೊ ನೆನವಿಗೊಮ್ಮೆ ನಾಮಘೋಷವ ಮಾಡಿ ನೆನವಿನೊಳು ನೀವು ಘನ ಬೆರದಾಡಿರೊ 1
ಹರಿಯ ನಾಮ ನೆನವುತಿಕ್ಕಿ ಚಪ್ಪಾಳಿ ದೂರಮಾಡಿ ಮನದ ಚಿಂತೆ ಮುಮ್ಮಳಿ ಸಾರಿ ದೂರುತಿದೆ ವೇದ ಪೂರ್ಣ ಕೇಳಿ ಅರಿತು ಹರಿಯ ನಾಮ ನೀವು ಬಲಗೊಳ್ಳಿರೊ 2
ಹರಿನಾಮಕಾಗಬ್ಯಾಡಿ ವಿಮುಖ ಅರಿತು ಮಾಡಿಕೊಳ್ಳಿ ಪ್ರಾಣಪದಕ ತರಳ ಮಹಿಪತಿಯ ತಾರಕ ತೋರುತಿಹ್ಯ ದು ಬ್ರಹ್ಮಸುಖವೊ 3
***