ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿದು ನೋಡೊ ನಿನ್ನೊಳಗೆ ನಿಜಬಣ್ಣ ಬೆಳಗಿನೊಳು ಬೆಳಗುದೋರುತಿಹ್ಯ ಜಗಜೀವನ ಪ
ಒಳಗೆ ವಿಷ ಮ್ಯಾಲೆ ವೇಷ ಇಳೆಯೊಳ್ಯಾಕೆ ಸೋಗು ತಾಪ ತಿಳಿದು ನಿಜವಾಗು 1
ಕೈಯೊಳು ಜಪ ಮೈಯೊಳು ಕೋಪ ಬಾಯೊಳಗ್ಯಾಕ ಮಂತ್ರ ದೇಹ್ಯೊಳಗಿಹ್ಯ ಸೋಹ್ಯವ ತಿಳಿದು ಧ್ಯಾಯಿಸೊ ಸೂತ್ರಾಂತ್ರಾ 2
ಮುಸುಕಿನೊಳು ಹಸಕವಿಟ್ಟು ಠಸಕ ದೋರಬ್ಯಾಡೊ ಉಸುರಿನೊಳು ಹಸನಗೊಂಡು ಮೀಸಲು ಮನಮಾಡೊ 3
ಹಿಡಿದು ಜನ ಪಡೆದಗುಣ ಒಡನೆ ಕೂಡೊ ಸುಪಥ ಹಿಡಿದು ಗುರುಪಾದ ಮಹಿಪತಿ ನೋಡೊ ಸ್ವಹಿತ 4
****