Showing posts with label ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ purandara vittala. Show all posts
Showing posts with label ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ purandara vittala. Show all posts

Saturday, 7 December 2019

ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ purandara vittala

ರಾಗ ಆನಂದಭೈರವಿ ಛಾಪು ತಾಳ

ಹೊರಗ್ಹೋಗಿ ಆಡದಿರ್ ‍ಹರಿಯೆ ಎನ್ನ ದೊರೆಯೆ, ನೆರೆ-
ಹೊರೆಯವರು ಕಂಡರೆ ದೂರುವುದರಿಯೆ ||ಪ||

ಮನೆಯೊಳಗಾಡೋದೆ ಚಂದ, ನೆರೆ
ಮನೆಗಳಿಗೆಲ್ಲ ಪೋಗುವರೆ ಮುಕುಂದ
ಮಾನಿನಿಯರು ಮೋಹದಿಂದ ನಿನ್ನ
ಮನವನಪಹರಿಸಿಕೊಂಬುವರೊ ಗೋವಿಂದ ||

ಏನೇನು ಬೇಕಾದ್ದು ಕೊಡುವೆ, ಕೆನೆ
ಬೆಣ್ಣೆ ಸಕ್ಕರೆ ತಂದು ಕೈಯಲ್ಲಿ ಕೊಡುವೆ
ಅನುದಿನ ಗುಣಗಳ ಪಾಡುವೆ ,ನಿನ-
ಗನುವಾಗಿ ಅಲಂಕಾರ ಮಾಡಿ ನಾ ನೋಡುವೆ ||

ಹೊಲಸು ಮೈಯವನೆಂಬುವರೊ, ದೊಡ್ಡ
ಕುಲಗಿರಿಯನ್ನು ಎತ್ತಿದವನೆಂಬುವರೊ
ಬಲುಕೇಶದನೆಂಬುವರೊ, ಕರುಳ
ಮಾಲೆಯ ಹಾಕಿದ ಘೋರನೆಂಬುವರೊ ||

ಭಿಕ್ಷೆ ಬೇಡಿದವನೆಂಬುವರೊ, ಭುವಿ
ರಕ್ಷಿಪ ರಾಯರ ಕಡಿದನೆಂಬುವರೊ
ಲಕ್ಷ್ಮಿಯ ಕಳೆದನೆಂಬುವರೊ ವೈ-
ಲಕ್ಷಣ್ಯದವ ಬೆಣ್ಣೆಕಳ್ಳನೆಂಬುವರೊ ||

ಮಾನ ಬಿಟ್ಟವನೆಂಬುವರೊ, ಮಹಾ
ಹೀನರ ಹಿಂದಟ್ಟಿ ಹೋದನೆಂಬುವರೊ
ದಾನವವೈರಿಯೆಂಬುವರೊ, ಸಿರಿ
ವನಜಾಕ್ಷ ಪುರಂದರವಿಠಲನೆಂಬುವರೊ ||
***

pallavi

horaghOgi Adadir hariye enna doreya nere horeyavaru kaNDare dUruvudariye

caraNam 1

maneyoLagADOde canda nere manegaLigella pOguvare mukunda
mAniniyaru mOhadinda ninna manavanapaharisi kombuvaro gOvinda

caraNam 2

EnEnu bEkAddu koDuve kene beNNe sakkare tandu kaiyalli koDuve
anudina guNagaLa pADuve ninaganuvAgi alankAra mADi nA nODuva

caraNam 3

holasu maiyavanembuvaro doDDa kulagiriyannu ettidavanembuvaro
balukEshadanembuvaro karuLa mAleya hAkida ghOranembuvaro

caraNam 4

bhikSe bEDidavanembuvaro bhuvi rakSipa rAyara kaDidanembuvaro
lakSmIya kaLedanembuvaro vai-lakSaNyadavabeNNe kaLLanembuvaro

caraNam 5

mAna biTTavanembuvaro mahA hInara hindaTTa hOdanembuvaro
dAnava vairiyembuvaro siri vanajAkSa purandara viTTalanembuvaro
***