Showing posts with label ಆನ್ಯಾತರವ ನೈಯ್ಯಾ gopala vittala ankita suladi ಪ್ರಮೇಯ ಸುಳಾದಿ AANYATARAVANNAYYA PRAMEYA SULADI. Show all posts
Showing posts with label ಆನ್ಯಾತರವ ನೈಯ್ಯಾ gopala vittala ankita suladi ಪ್ರಮೇಯ ಸುಳಾದಿ AANYATARAVANNAYYA PRAMEYA SULADI. Show all posts

Wednesday, 2 December 2020

ಆನ್ಯಾತರವ ನೈಯ್ಯಾ gopala vittala ankita suladi ಪ್ರಮೇಯ ಸುಳಾದಿ AANYATARAVANNAYYA PRAMEYA SULADI

Audio by Mrs. Nandini Sripad

 ಶ್ರೀ ಗೋಪಾಲದಾಸಾರ್ಯ ವಿರಚಿತ   ಪ್ರಮೇಯ ಸುಳಾದಿ 


 ರಾಗ ಚಕ್ರವಾಕ 


 ಧ್ರುವತಾಳ 


ಆನ್ಯಾತರವ ನೈಯ್ಯಾ ಅಲ್ಪ ಅತ್ಯಂತ ನಿರುತ

ಕಾಣೆನಾ ಒಂದಾದರು ನಿನ್ನ ಹೊರತು ದೇವಾ

ರೇಣು ಮಾತ್ರವಾದರು ನಿನ್ನ ಹೊರತು

ಜ್ಞಾನ ಆಜ್ಞಾನ ನಮಗೆ ಆಗುವದೆ

ನಾನೇ ಮಾತ್ರವು ಅಲ್ಲ ಸಿರಿ ಅಜಭವಾದಿಗಳು

ನೀ ನಡೆಸದಿರುವುದು ನಿಶ್ಚೇಷ್ಟದಿ

ಅನಾದಿ ಕರ್ಮ ಬಂಧನಾಗಿ ಇಪ್ಪುವ ನಾನು

ಏನು ಬಲ್ಲೆನೋ ನಿನ್ನ ಮಹಿಮೆಯ

ಕಾಣೆ ನಾ ಒಂದಾದರೂ ನಿನ್ನ ಸ್ವಾತಂತ್ರ ವಿನಹಾ ಮನದಿ

ನಾನೆ ಸ್ವಾತಂತ್ರನೆಂದು ಹಿಗ್ಗಿ ಹಿಗ್ಗಿ

ನಾನಾ ಯೋನಿಗಳಲ್ಲಿ ಜನಿಸಿ ಜನಿಸಿ ಬಂದು

ಏನು ಬಟ್ಟ ಬವಣೆ ನೀನರಿಯೇ

ಖೂನ ವರಿಯದಪ್ಪಂದೆ ಒಳಗಿದ್ದು

ನಾನಾ ಚೇಷ್ಟೇಗಳೆಲ್ಲ ನೀನೆ ಮಾಡಿ

ಪ್ರಾಣಿಗಳಿಗೆ ಸುಖದುಃಖ ಉಣಿಸಿ ಒಡನೆ ಇದ್ದು

ನೀನು ನಿರ್ಲಿಪ್ತನಾಗಿ ನಿತ್ಯವಾಗಿ

ಜಾಣ ಚನ್ನಿಗರಾಯ ಗೋಪಾಲವಿಟ್ಠಲ 

ಕಾಣದೆ ನಿನ್ನ ನಾ ಬಲು ದಣಿದೆ ॥ 1 ॥ 


 ಮಟ್ಟತಾಳ 


ದಾರಿದ್ರವೇ ಸಿರಿಯು ಸಿರಿಯೇ ದಾರಿದ್ರವು

ಆರೋಗ್ಯವೇ ರೋಗ ರೋಗವೇ ಆರೋಗ್ಯ

ಬಾರದ್ದೆ ಬಂದದ್ದು ಬಂದದ್ದೆ ಬಾರದ್ದು

ಸೇರದ್ದೆ ಸೇರಿದ್ದು ಸೇರಿದ್ದೆ ಸೇರದ್ದು

ತೋರದ್ದೆ ತೋರಿದ್ದು ತೋರಿದ್ದೆ ತೋರದ್ದು

ಕಾರಣ ಕಾರಣ ವಾರಣ ಎಲ್ಲವು

ನಾರಾಯಣನು ಒಲಿದ ನರನಿಗೆ

ಈ ರೀತಿ ಮಾಡಿ ಅನುಭವಕೆ ಇನ್ನು

ತೋರಿ ಗೊಡುತಲಿ ಕ್ಷಣಕ್ಷಣಕೆ ಬಿಡದೆ

ಈ ರೀತಿ ತಿಳಿಸಿದ್ದು ಒಳ ಹೊರಗೆ

ಭಾರಕರ್ತನಾಗಿ ಬಹು ವ್ಯಾಪ್ತ ಸ್ವಾಮಿ

ಆರು ಇದರ ವಿವರ ಅರುವರೋ ಎನಗೆ

ಶ್ರೀರಮಣ ಚಲುವ ಗೋಪಾಲವಿಟ್ಠಲ 

ತಾರದವನೆ ಕೆಟ್ಟ ಅನುಭವಕೆ ನಿನ್ನ ॥ 2 ॥ 


 ರೂಪಕತಾಳ 


ಕಂಡದ್ದೆ ಕಾಣದ್ದು ಕಾಣದ್ದೆ ಕಂಡದ್ದು

ಉಂಡದ್ದೆ ಉಣ್ಣನೆ ಉಣ್ಣನು ಉಂಡದ್ದು ಮರುಳೆ

ದಂಡಣವೇ  ಸುಖವು ಸುಖವೇ ದಂಡಣವು

ಕೆಂಡ ಸೀತವು ಸಮವು ಆಗುವದಲ್ಲದೆ

ಪುಂಡರೀಕಾಕ್ಷನ ಕಂಡ ಮೇಲಕ್ಕೆ ನಿನ್ನ

ಮಂಡಿಯವು ಬಾರದು ಮತ್ತೆ ಮನುಜಗೆ

ಪಾಂಡವ ಪ್ರಿಯ ಗೋಪಾಲವಿಟ್ಠಲರೇಯಾ 

ಕಂಡದ್ದಲ್ಲದೆ ಪಾರ್ಥಗೊಲಿದ ಮಹಾಮಹಿಮ ॥ 3 ॥ 


 ಝಂಪೆತಾಳ 


ಆರನುದ್ಧರಿಸುವೇನೆಂದು ಮನದಿ ಮಾಳ್ಪಿ

ತೋರಿ ಕೊಡುವುವೆ ಸಕಲ ಸಾಧನಗಳವಗೆ

ಬಾರದಿದ್ದರೆ ಮನಕೆ ಅವಗೆ ಚೆನ್ನಾಗಿ ನಿಜ

ಪ್ರೇರಿಸುವಿ ವಿಧಿಯು ವಿಹಿತಾಚರಣಗಳಿನ್ನು

ಬಾರಿ ಬಾರೀಗೆ ಸ್ಮೃತಿಯು ತಂದಿತ್ತು

ದೂರನೆ ಮಾಳ್ಪಿ ದುರಿತಗಳ ಅಪಾರ ಇದ್ದರನ್ನ

ಕ್ರೂರನರರಿಂದ ಒಂದು ಧರ್ಮವಾದರು ಇನ್ನು

ಪ್ರೇರಿಸಿ ಕೆಡಿಸೆ ಕೊಡುವಿ ಇನ್ನವರಿಗೆ

ಮಾರನಯ್ಯ ಚಲುವ ಗೋಪಾಲವಿಟ್ಠಲ 

ಬಾರೋ ನಿನಗಿನ್ನು ಈಡಾರೋ ಪ್ರಭುವೆ ॥ 4 ॥ 


 ತ್ರಿವಿಡಿತಾಳ 


ಯೋಚನ್ಯಾತಕ್ಕೆ ದೇವಾ ಎನ್ನ ಪೊರೆವದಕ್ಕೆ

ಸೂಚನಾ ತೋರಿ ಸುಮ್ಮನಾಗಲಿ ಬೇಡ

ನೀಚ ನಾನು ನಿತ್ಯದಲ್ಲಿ ನಿನ್ನ ಮರತು

ಯೋಚನೆ ಮಾಡುವೆ ಕಂಡವರ

ಚ್ಯಾಚಿ ಚ್ಯಾಚಿ ಕರಗಳು ಬೇಸತ್ತವು

ವಾಚಾ ತುತಿಸಿ ವದನವೆಲ್ಲಾ ಕೆಟ್ಟಿತಯ್ಯಾ

ನಾಚಿಕೆ ಇಲ್ಲ ಇನ್ನೆ ಈ ಮನಸಿಗಿನ್ನು

ಮೋಚಕ ಮಾರ್ಗವು ಪಿಡಿಯದಿನ್ನು

ಮೋಚಕ ಮಾರ್ಗವ ವಿಚಿತ್ರ ಮಹಿಮ ನೀ

ಯೋಚಿಸು ಎನಗಾಗಿ ಊಚಗತಿಯ ಸಾಧನ ಮಾರ್ಗಕ್ಕೆ

ನೀಚ ವಿಷಯಗಳಿಗೆ ನೀ ಎನ್ನ ಶಳದರೆ

ಯಾಚಕ ಎನ್ನಿಂದ ಲೇನಾಹದೋ

ಖೇಚರವಾಸಿ ನೀ ನೀಚ ಸಾವಾಸಿ ನಾ

ಆಚ್ಯಾರವೇನೋ ನೀ ಅರಿಯದಿದ್ದ

ಶ್ರೀಚಕ್ರಪಾಣಿ ಗೋಪಾಲವಿಟ್ಠಲ ಕೇಳೊ

ನೀಚ ಎಂದರೆ ಎನ್ನ ಪೊರೆವರಾರೋ ॥ 5 ॥ 


 ಅಟ್ಟತಾಳ 


ನೀನೊಲಿಯಲು ಅಜಭವಾದಿಗಳು ವೊಲಿವರು

ನೀನೊಲಿಯಲು ಅಮರರು ಎಲ್ಲಾ ಕರೆವರು

ನೀನೊಲಿಯಲು ಅವನಿಯರೆಲ್ಲ ವೊಲಿವರು

ನೀನೊಲಿಯಲು ಒಂದು ಬಾರದ್ದು ಎನಗಿಲ್ಲ

ದಿನವೆ ಒಂದು ಯುಗ ನಿನ್ನ ಕಾಣದ

ಘನ ಯುಗ ಒಂದಿನ ನಿನ್ನ ಕಾಣುವನಿಗೆ

ಕನಸೇ ಜಾಗ್ರವು ಮತ್ತೆ ಜಾಗ್ರವೇ ಕನಸಿನ್ನು

ಧನವೇ ನಿಧನವಯ್ಯಾ ಮನವೆರಗಿದವಗೆ

ನೆನೆದರೆ ಆಗೋದು ಸಕಲ ಸುಖವೆಲ್ಲ

ಇನಿತು ಇನಿತು ಎಂದು ವಿವರ ಪೇಳಲಿ ಸಲ್ಲ

ಧನ ವಸನವು ಪಶು ವನುತೆ ಸುತರು ಮತ್ತೆ

ತನು ಆರೋಗ್ಯ ತಂದೆ ಜನನಿ ಸಹಿತಿನ್ನು

ಇನಿತು ಸುಖವು ಎಲ್ಲ ಏಕವಾಗಿದ್ದವಗೆ

ಇನಿತು ಸುಖವು ಉಂಟು ಇನಿತು ಸದೃಶ್ಯ ಸ್ವಲ್ಪ

ನೆನೆವ ಸುಖದ ಭೋಗ ಅನುಭೋಗ್ಯನೆ ಬಲ್ಲ

ಮನುಜನೇನು ಬಲ್ಲ ಮಂದ ಬುದ್ಧಿಯವ

ಘನ ದಯಾನಿಧೆ ಗೋಪಾಲವಿಟ್ಠಲ 

ನಿನಗೆ ನೀ ಕರುಣಿಸಿ ನಿನ್ನವರವನೆನ್ನೊ ॥ 6 ॥ 


 ಆದಿತಾಳ 


ಸಾಧನವೆ ಸಾಧ್ಯಾ ಸಾಧ್ಯ ಸಾಧನವು

ಕ್ರೋಧವೆ ಭಕುತಿಯು ಭಕ್ತಿಯು ಕ್ರೋಧವು

ಆದಿಯು ಅಂತ್ಯವು ಅಂತ್ಯವೇ ಆದಿಯು

ಭೇದವೇ ಅಭೇದವು ಅಭೇದವೇ ಭೇದವು

ನಾದದೊಳಗೆ ರೂಪ ರೂಪದೊಳಗೆ ನಾದ

ಸ್ವಾದದೊಳಗೆ ಸ್ವಾದ ಸ್ವಾದದರೊಳಗೆ ಸ್ವಾದ

ಮಾಧೂರ್ಯ ದೊಳಗೆಲ್ಲ ಮಾಧುರ್ಯ ವಸ್ತುವು

ಆದಿ ಮೂರುತಿ ದೇವ ನಿನ್ನನು ಭೋಗಿಸೆ

ಭಾದೆ ಅವರು ತೋರರೊಂದಾದರವಗೆ

ಆದರಿಸುತ ಅಲ್ಲಿ ಇದ್ದ ಬಳಿಕ ಸ್ವಾಮಿ

ಕ್ರೋಧ ರಹಿತ ರಾಮ ಗೋಪಾಲವಿಟ್ಠಲ 

ಹಾದಿ ತೋರಿಸು ಪಥ ಯಾವದು ಸಾಧನ ॥ 7 ॥ 


 ಜತೆ 


ದಿನದಿನಕೆ ಅಭಿವೃದ್ಧಿ ಆಗಿ ನಿನ್ನಲಿ ಎನಗೆ

ಘನ ಜ್ಞಾನ ಭಕುತಿ ಕೊಡೊ ಗೋಪಾಲವಿಟ್ಠಲ ॥

*******