Showing posts with label ಕಂಡದೈವಕ್ಕೆ ಕಂಗೆಟ್ಟು ಕೈ ಮುಗಿದು ದಣಿದಿಯಾತಕೋ rukmesha. Show all posts
Showing posts with label ಕಂಡದೈವಕ್ಕೆ ಕಂಗೆಟ್ಟು ಕೈ ಮುಗಿದು ದಣಿದಿಯಾತಕೋ rukmesha. Show all posts

Thursday, 5 August 2021

ಕಂಡದೈವಕ್ಕೆ ಕಂಗೆಟ್ಟು ಕೈ ಮುಗಿದು ದಣಿದಿಯಾತಕೋ ankita rukmesha

 ..

kruti by rukmangadaru

ಕಂಡ ದೈವಕ್ಕೆ ಕಂಗೆಟ್ಟು ಕೈ ಮುಗಿದು | ದಣಿದಿಯಾತಕೋ ಪ


ದಂಡವನು ಪಿಡಿದು ಮಡದಿ ಮಾರ್ಗವ ಮೆಟ್ಟಿ |ದಂಡಕಾರಣ್ಯದಿ ಚರಿಸುತ ಮುನಿಗಳ ಬಿನ್ನಪದಿಂದ |ದಂಡಕೋಣದ ಖಂಡಿಪ | ಚಂಡಕಿರಣ ಕುಲತಿಲಕನಸೇರಿ ಬದುಕುವ ಶರಧಿ ಗರ್ವ ಪರಿಹರನಸೇರಿ ಹೋದ ದಿವಿಜರ ಬಿಡಿಸಿ ಸಿರಿಯಿತ್ತು ಸಲಹಿದಾತನ 1

ಮರಳು ಭಾವಕೆ ಮೆಚ್ಚಿ ತಾಂ ಶಬರಿಯ ಗುಡಿಸಲನೈದು | ಕಿರುಳ ಬೋರೆ ಹಣ್ಣು ಮೆದ್ದು ಪರಮ ಕರುಣದಿ |ಸರಳಾದ ವಿಮಾನದೊಳು ಕುಳ್ಳಿರಿಸಿ ಸುರರು ಪೊಗಳಲು |ಹುರುಳಿಲ್ಲದ ಭವವನಳಿದು ಪರಮ ಪದವಿಯನಿತ್ತನ 2

ರಕ್ಕಸರರಸನ ಮನಿಯ ಪೊಕ್ಕು ಶಿಖಿಯನಿಕ್ಕಿ |ಶಿಖರವ ಮುಕ್ಕು ಮಾಡಿ ಬಂದ ಪವನ ತನಯಗೆ ಮೆಚ್ಚಿ |ತವಕದ ಜನ ಪದವ ಕೊಟ್ಟು ಮೊರೆಹೊಕ್ಕ ವೈರಿ ತಮ್ಮಗೆ |ರುಕ್ಮನಗರ ಧಾರೆಯೆರೆದ ಶ್ರೀ ರಾಮಚಂದ್ರನ 3

***