Showing posts with label ಹರಿನೀ ಪಿಡಿದ ಕಲ್ಲವೆ ರತುನಹರಿ prasannavenkata. Show all posts
Showing posts with label ಹರಿನೀ ಪಿಡಿದ ಕಲ್ಲವೆ ರತುನಹರಿ prasannavenkata. Show all posts

Monday, 18 November 2019

ಹರಿನೀ ಪಿಡಿದ ಕಲ್ಲವೆ ರತುನಹರಿ ankita prasannavenkata

by ಪ್ರಸನ್ನವೆಂಕಟದಾಸರು
ಹರಿನೀ ಪಿಡಿದ ಕಲ್ಲವೆ ರತುನಹರಿನಿನ್ನಡಿಗಲ್ಲದವನೆ ಯವನ ಪ.

ಹರಿನೀನೊಲಿದ ಕಪಿರಾಜ ವಿಧಿಯುಹರಿನೀನೊಲಿಯದಿರೆ ಕಪಿಗೆ ವಧೆಯುಹರಿನೀ ಗೆಲಿಸೆ ಪಾರ್ಥನಿಗೆ ಗೆಲುವುಹರಿನಿನ್ನ ಛಲದಿ ಕೌರವರಿಗಳಿವು1

ಹರಿನೀ ಮೆಚ್ಚಿದರ್ಭಕರಾರ್ಯರುಹರಿನೀ ಮೆಚ್ಚದಾರ್ಯರೆ ಕಿರಿಯರುಹರಿನಿನ್ನುಚ್ಚರಿಪರು ಮಾನ್ಯರುಹರಿನಿನ್ನೆಚ್ಚರಿಲ್ಲದ ಜನರ್ಹುಚ್ಚರು2

ಹರಿನೀ ಕನಕಗಿರಿಗಣುಕಲ್ಲೆನಿಪೆಹರಿನೀ ತೃಣವೆಟ್ಟ ಮಾಡುತಲಿಪ್ಪೆಹರಿನೀ ಘನಕೆ ಘನತರ ಮಹಿಮಹರಿನೀ ಪ್ರಸನ್ವೆಂಕಟಪ ಹೊರೆಯೆಮ್ಮ3
********