..
ಪಾಪೋಸು ಹೋದುವಲ್ಲಾ ಪ
ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ.
ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1
ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2
ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
***