Showing posts with label ಇಂದು ಮುಖಿಯೆ ನಿನ್ನ guruvijaya vittala ankita suladi ರಮಾಸ್ತುತಿ ಸುಳಾದಿ INDUMUKHIYE NINNA RAMASTUTIH SULADI. Show all posts
Showing posts with label ಇಂದು ಮುಖಿಯೆ ನಿನ್ನ guruvijaya vittala ankita suladi ರಮಾಸ್ತುತಿ ಸುಳಾದಿ INDUMUKHIYE NINNA RAMASTUTIH SULADI. Show all posts

Monday 9 December 2019

ಇಂದು ಮುಖಿಯೆ ನಿನ್ನ guruvijaya vittala ankita suladi ರಮಾಸ್ತುತಿ ಸುಳಾದಿ INDUMUKHIYE NINNA RAMASTUTIH SULADI

Audio by Mrs. Nandini Sripad

ಶ್ರೀ ಮೊದಲಕಲ್ಲು ಶೇಷದಾಸರ ರಚನೆ 
( ಗುರುವಿಜಯವಿಠಲ ಅಂಕಿತ) ಶ್ರೀ ರಮಾಸ್ತುತಿ  ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಇಂದುಮುಖಿಯೆ ನಿನ್ನ ಸಂದರುಶನದಿಂದಾ -
ನಂದವಾಯಿತು ಅರವಿಂದನಯನೆ
ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ
ಸುಂದರವಾದ ರೂಪದಿಂದ ಬಂದು
ಮಂದಹಾಸದಿಂದ ಮಾತನಾಡಿದರಿಂದ
ಬೆಂದು ಪೋದವೆನ್ನ ತ್ರಿವಿಧ ತಾಪ
ಇಂದಿರೆ ಈ ರೂಪದಿಂದ ತೋರಿದಳು
ಬಂಧುವೆನಿಪ ಲೋಕ ಗುರು ಸತಿಯೊ
ಕಂದು ಕಂಧರನಾದ ದೇವನ್ನ ರಾಣಿಯೊ
ಇಂದ್ರಾಣಿ ಮೊದಲಾದ ಜನರೋರ್ವಳೊ
ಮಂದಾಕಿನಿಯೊ ಇದರೊಳೊಂದರಿಯೇ ಕರುಣ -
ಸಿಂಧುವೆ ನಿನ್ನ ಪದಕೆ ನಮೊ ನಮೊ ನಮೋ
ಮಂದರ್ಗೆ ಯೋಗ್ಯವಾದ ಮಾನುಷ್ಯ ದೇಹವನ್ನು
ಪೊಂದಿಪ್ಪ ಕಾರಣದಿಂದ ನಿನ್ನ
ಅಂದವಾದ ರೂಪ ಕ್ರಿಯೆಗಳನ್ನು ತಿಳಿದು
ವಂದಿಸಿ ವರಗಳ ಬೇಡಲಿಲ್ಲ
ಇಂದಿರೆ ರಮಣನ ಬಂಧಕ ಶಕುತಿಯು
ಮಂದನಾದವ ನಾನು ಮೀರುವನೇ
ಕಂದನ ಅಪರಾಧವೆಣಿಸದಲೆ ನೀನು
ಅಂದ ವಚನವನ್ನು ಸತ್ಯ ಮಾಡಿ
ಬಂಧುನೆನಿಸಿಕೊಂಬ ಗುರುವಿಜಯವಿಠ್ಠಲನ್ನ 
ಎಂದೆಂದು ಅಗಲದಲಿಪ್ಪ ವರವ ನೀಡು ॥ 1 ॥

 ಮಟ್ಟತಾಳ 

ಸಾನುರಾಗದಿ ಎನ್ನ ಸಾಮೀಪ್ಯವ ನೈದಿ
ಪಾಣಿದ್ವಯದಲ್ಲಿ ವೇಣಿ ಸ್ಪರ್ಶ ಮಾಡಿ
ಏನು ಬೇಡುವೆ ಬೇಡು ನೀಡುವೆನೆಂತೆಂದು
ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ
ಮಾನುಷಾನ್ನ ಜನಿತ ಅಜ್ಞಾನದಿಂದ
ಜ್ಞಾನನಿಧಿಯೆ ನಿನ್ನ ಪದದ್ವಂದ್ವಕೆ ನಮಿಸಿ
ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ
ಪೂರ್ಣ ಮಾಡು ಎಂದು ವರಗಳ ಬೇಡದಲೆ
ನಿನ್ನ ಪದದ್ವಂದ್ವಕೆ ನಮಿಸಿ
ಹೀನ ಮನೋಭಾವ ಮಾಡಿದೆ ಹೇ ಜನನಿ
ಧೇನುವಿಗೆ ವತ್ಸ ಮಾಡಿದ ಅಪಚಾರ
ತಾನೆಣಿಸಿ ಅದರ ಸಾಕದೆ ಬಿಡುವದೆ
ಮಾನನಿಧಿಯೆ ಎನ್ನ ಅನುಚಿತವೆಣಿಸದಲೆ
ಏನು ಬೇಡಿದ ವರವ ನೀಡುವೆ ಎಂತೆಂದ
ವಾಣಿ ಸತ್ಯ ಮಾಡು ಅವ್ಯವಧಾನದಲಿ
ಜ್ಞಾನಪೂರ್ಣ ಗುರುವಿಜಯವಿಠ್ಠಲರೇಯನ 
ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ ॥ 2 ॥

 ತ್ರಿವಿಡಿತಾಳ 

ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು
ತನ್ನಿಂದ ತಾನೆ ಬಂದು ಒದಗುತಿರೆ
ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ
ಬಿನ್ನಪವನು ಉಂಟು ಗ್ರಹಿಸಬೇಕು 
ಅನಂತ ಜನುಮದ ಪುಣ್ಯ ಪ್ರಭಾವದಿಂದ
ಘನ್ನ ಮಹಿಮನಾದ ಪುರುಷನೋರ್ವ
ಕ್ಷಣವಗಲದಲಿಪ್ಪ ಆಪ್ತನಾದವನೆನಿಸಿ
ಎನ್ನ ವಿರಹಿತವಾದ ಸ್ಥಾನವನ್ನು
ಕಣ್ಣಿಲಿ ನೋಡಲಾರೆನೆಂದು ನುಡಿದವನ್ನ
ಎನ್ನ ದುರ್ಭಗದಿಂದ ಅಗಲಿ ನಾನಾ
ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ
ಮನ್ನಿಸಿ ಮನಕೆ ತಂದು ಪೂರ್ವದಂತೆ
ಮನ್ಮನದಲಿ ತೋರೊ ವ್ಯವಧಾನ ಮಾಡದಲೆ
ಇನ್ನಿದೆ ಬೇಡುವೆ ಜನನೀಯೇ
ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ
ಮನ್ಮನೋರಥವನು ಪೂರ್ಣ ಮಾಡು ಆ -
ಪನ್ನರ ರಕ್ಷಿಸುವ ಬಿರಿದು ನಿನಗೆ ಉಂಟು
ಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇ
ಪನ್ನಂಗತಲ್ಪ ಗುರುವಿಜಯವಿಠ್ಠರೇಯ 
ನಿನ್ನ ವಾಕ್ಯವವಹಿಪ ಸರ್ವಕಾಲ ॥ 3 ॥

 ಅಟ್ಟತಾಳ 

ಕರಣಗಳಲಿ ಹರಿ ವ್ಯಾಪಕನೆಂತೆಂಬ
ಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯ
ಪರಮೇಷ್ಠಿ ಮೊದಲಾದ ಸುರರು ಸಹಿತನಾದ
ಸಿರಿಪತಿ ವಹಿಸುವನೆಂದು ಪೇಳುತಲಿರೆ
ಕರಣಮಾನಿಗಳಾದ ಸುರರಿತ್ತ ವರಗಳ
ಹರಿ ಸತ್ಯ ಮಾಡುವನೆಂಬದಚ್ಚರವೇನೊ
ಶರಣನ್ನ ಮನೋರಥ ಪೂರ್ಣ ಮಾಡುವದಕ್ಕೆ
ಕೊರತೆ ನಿನಗಾವುದು ಕೋಮಲಾಂಗಿಯೆ ನಿನ್ನ
ಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆ
ತ್ವರಿತದಿಂದಲಿ ಈ ವರವನ್ನೆ ಪಾಲಿಸು
ಸುರಪಕ್ಷಪಾಲ ಗುರುವಿಜಯವಿಠ್ಠಲ ನಿಮ್ಮ
ಕರವಶವಾಗಿಪ್ಪ ಆವಾವ ಕಾಲದಲಿ ॥ 5 ॥

 ಆದಿತಾಳ 

ಆವಾವ ಜನ್ಮದಲ್ಲಿ ಅರ್ಚಿಸಿದೆನೋ ನಿನ್ನ
ಆವಾವ ಕಾಲದಲ್ಲಿ ಅನುಗ್ರಹಿಸಿದ ವರವು
ಈ ವಿದ್ಯಮಾನವಾದ ಜನುಮದಲೊಮ್ಮೆಗೆನ್ನ
ದೇವಿಯೆ ನಿನ್ನ ಪಾದ ಸಾರಿದವನಲ್ಲಿ
ಗೋವತ್ಸ ನ್ಯಾಯದಿಂದ ನಿನಗೆ ನೀನು ಬಂದು
ಆವದು ಬೇಡಿದ ವರಗಳನೀವೆನೆಂದು
ಸುವಾಣಿಯಿಂದ ಎನ್ನ ಆದರಿಸಿದ ನಿನ್ನ
ಔದಾರ್ಯತನಕಿನ್ನು ಆವದಾವದು ಸಮ
ಶ್ರೀ ವತ್ಸಲಾಂಛನ ಗುರುವಿಜಯವಿಠ್ಠಲನ್ನ 
ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸೇ ॥ 5 ॥

 ಜತೆ 

ನಿನ್ನ ದರುಶನದಿಂದ ಅನಿಷ್ಟವು ನಾಶ
ಘನ್ನ ಇಷ್ಟ ರೂಪ ಗುರುವಿಜಯವಿಠ್ಠಲ ಪ್ರಾಪ್ತ ||
************

ಶ್ರೀಮಹಾಲಕ್ಮೀ ಸ್ತೋತ್ರ

ಧ್ರುವತಾಳ


ಇಂದುಮುಖಿಯೆ ನಿನ್ನ ಸಂದರುಶನದಿಂದಾನಂದವಾಯಿತು ಅರವಿಂದನಯನೆ ಅಂದಿಗೆ ಗೆಜ್ಜೆ ಮೊದಲಾದಾಭರಣದಿಂದ ಸುಂದರವಾದ ರೂಪದಿಂದ ಬಂದು ಮಂದಹಾಸದಿಂದ ಮಾತನಾಡಿದುದರಿಂದಬೆಂದು ಪೋದೆವೆನ್ನ ತ್ರಿವಿಧ ತಾಪ ಇಂದಿರೇ ಈ ರೂಪದಿಂದ ತೋರಿದಳು ಬಂಧುನೆನಿಪ ಲೋಕ ಗುರು ಸತಿಯೊಕಂದುಕಂಧರನಾದ ದೇವನ್ನ ರಾಣಿಯೊ ಇಂದ್ರಾಣಿ ಮೊದಲಾದ ಜನರೋರ್ವಳೊ ಮಂದಾಕಿನಿಯೊ ಇದರೊಳೊಂದರಿಯೇ ಕರುಣಸಿಂಧುವೆ ನಿನ್ನ ಪದಕೆ ನಮೊ ನಮೊ ಮಂದರ್ಗೆ ಯೋಗ್ಯವಾದ ಮನುಷ್ಯ ದೇಹವನ್ನು ವೊಂದಿಪ್ಪ ಕಾರಣದಿಂದ ನಿನ್ನ ಅಂದವಾದ ರೂಪ ಕ್ರಿಯಗಳನ್ನು ತಿಳಿದು ವಂದಿಸಿ ವರಗಳು ಬೇಡಲಿಲ್ಲ ಇಂದಿರೆ ರಮಣನ ಬಂಧಕ ಶಕುತಿಯು ಮಂದನಾದವ ನಾನು ಮೀರುವೆನೇ ಕಂದನ ಅಪರಾಧವೆಣಿಸದಲೇ ನೀನು ಅಂದ ವಚನವನ್ನೆ ಸತ್ಯ ಮಾಡಿ ಬಂಧುನೆನಿಸಿಕೊಂಬ ಗುರು ವಿಜಯ ವಿಠ್ಠಲ ನ್ನ ಎಂದೆಂದಗಲದಿಪ್ಪ ವರವ ನೀಡು 

|| ೧ ||

 ಮಟ್ಟತಾಳ


ಸಾನುರಾಗದಿ ಎನ್ನ ಸಾಮೀಪ್ಯವನೈದಿ ಪಾಣಿ ದ್ವಯದಲ್ಲಿ ವೇಣು ಸ್ಪರ್ಶ ಮಾಡಿ ಏನು ಬೇಡುವೆ ಬೇಡು ನೀಡುವೆನೆಂತೆಂದು ವಾಣಿಯಿಂದಲಿ ನುಡಿದು ಅನುಗ್ರಹಿಸಿದುದಕೆ ಮಾನುಷನ್ನ ಜನಿತ ಅಜ್ಞಾನದಿಂದ ಜ್ಞಾನನಿಧಿಯೆ ನಿನ್ನ ಪದ ದ್ವಂದ್ವಕೆ ನಮಿಸಿ ಮಾನಸಿನಾಪೇಕ್ಷೆ ವಿವರಿಸಿ ಬಿನ್ನೈಸಿ ಪೂರ್ಣ ಮಾಡುಯೆಂದು ವರಗಳ ಬೇಡದಲೆ ಹೀನ ಮನೋಭಾವ ಮಾಡಿದೆ ಹೇ ಜನನಿ ಧೇನುವಿಗೆ ವತ್ಸ ಮಾಡಿದ ಅಪಚಾರ ತಾನೆಣಿಸಿ ಅದರ ಸಾಕದೆ ಬಿಡುವದೆ ಮಾನ ನಿಧಿಯೆ ಎನ್ನ ಅನುಚಿತವೆಣಿಸದಲೆ ಏನು ಬೇಡಿದ ವರವ ನೀಡುವೆನೆಂತೆಂದ ವಾಣಿ ಸತ್ಯ ಮಾಡು ಅವ್ಯವಧಾನದಲಿ ಜ್ಞಾನಪೂರ್ಣ ಗುರು ವಿಜಯ ವಿಠ್ಠಲರೇಯ ಪ್ರೇರಣೆಯಿಂದಲ್ಲಿ ಪ್ರಾರ್ಥಿಸುವೆನು ನಿನ್ನ 

|| ೨ ||

ತ್ರಿವಿಡಿತಾಳ


ನಿನ್ನನುಗ್ರಹದಿಂದ ಧನ ಮೊದಲಾದ ವಸ್ತು ತನ್ನಿಂದ ತಾನೆ ಬಂದು ಒದಗುತಿರೆ ಇನ್ನಿದಕ್ಕೆ ನಾನು ನಿನ್ನ ಪ್ರಾರ್ಥಿಪೊದಿಲ್ಲ ಬಿನ್ನಪವನು ಉಂಟು ಗ್ರಹಿಸಬೇಕು ಅನಂತ ಜನುಮದ ಪುಣ್ಯ ಪ್ರಭಾವದಿಂದ ಘನ್ನ ಮಹಿಮನಾದ ಪುರುಷನೋರ್ವ ಕ್ಷಣವಗಲದಿಪ್ಪ ಆಪ್ತನಾದವನೆನಿಸಿ ಎನ್ನ ವಿರಹಿತವಾದ ಸ್ಥಾನವನ್ನು ಕಣ್ಣಿಲಿ ನೋಡಲಾರೆನೆಂದು ನುಡಿದವನ್ನ ಎನ್ನ ದುರ್ಭಾಗ್ಯದಿಂದ ಅಗಲಿ ನಾನಾ ಬನ್ನ ಬಡುತಲಿಪ್ಪೆ ನಿಮಿಷ ಒಂದ್ಯುಗವಾಗಿ ಮನ್ನಿಸಿ ಮನಕ ತಂದು ಪೂರ್ವದಂತೆ ಮನ್ಮನದಲಿ ತೋರೊ ವ್ಯವಧಾನ ಮಾಡದಲೆ ಇನ್ನಿದೆ ಬೇಡುವೆನೇ ಜನ್ನನೀಯೇ ನಿನ್ನಿಂದ ನುಡಿದಂಥ ವಾಕ್ಯ ಸಫಲ ಮಾಡಿ ಮನ್ಮನೋರಥವನು ಪೂರ್ಣ ಮಾಡು ಆಪನ್ನರ ರಕ್ಷಿಸುವ ಬಿರಿದು ನಿನಗೆ ಉಂಟು ಸನ್ನುತಿಸಿ ಬೇಡಿಕೊಂಬೆ ಗುಣನಿಧಿಯೇ ಪನ್ನಂಗತಲ್ಪ ಗುರು ವಿಜಯ ವಿಠ್ಠರೇಯ ನಿನ್ನ ವಾಕ್ಯ ವೊಹಿಪ ಸರ್ವಕಾಲ 

|| ೩ ||

ಅಟ್ಟತಾಳ


ಕರಣಗಳಲಿ ಹರಿ ವ್ಯಾಪಕನೆಂತೆಂಬ ಪರಿಯನ್ನು ತಿಳಿದಿಪ್ಪ ನರ ನುಡಿದ ವಾಕ್ಯ ಪರಮೇಷ್ಠಿ ಮೊದಲಾದ ಸುರರು ಸಹಿತನಾದ ಸಿರಿ ಪತಿ ವೊಹಿಸುವನೆಂದು ಪೇಳುತಲಿರೆ ಕರಣಮಣನಿಗಳಾದ ಸುರರಿತ್ತ ವರಗಳ ಹರಿ ಸತ್ಯ ಮಾಡುವನೆಂಬದಚ್ಚರವೇನೊ ಶರಣನ್ನ ಮನೋರಥ ಪೂರ್ಣ ಮಾಡುವುದಕ್ಕೆ ಕೊರತೆ ನಿನಗಾವುದು ಕೋಮಲಾಂಗಿಯೆ ನಿನ್ನ ಚರಣ ದ್ವಂದ್ವಕೆ ನಮಿಸಿ ಶರಗೊಡ್ಡಿ ಬೇಡುವೆ ತ್ವರಿತದಿಂದಲಿ ಈ ವರವನ್ನೆ ಪಾಲಿಸು ಸುರಪಕ್ಷಪಾಲ ಗುರು ವಿಜಯ ವಿಠ್ಠಲ ನಿಮ್ಮ ಕರವಶನಾಗಿಪ್ಪ ಆವಾವ ಕಾಲದಲಿ 

|| ೪ ||

ಆದಿತಾಳ


ಆವಾವ ಜನ್ಮದಲ್ಲಿ ಅರ್ಚಿಸಿದೆನೊ ನಿನ್ನ ಆವಾವ ಕಾಲದಲ್ಲಿ ಅನುಗ್ರಹಿಸಿದ ವರವು ಈ ವಿದ್ಯ ಮಾನವಾದ ಜನುಮದಲೊಮ್ಮೆ ಘನ್ನ ದೇವಿಯೋ ನಿನಪಾದ ಸಾರಿದವನಲ್ಲ ಗೋವತ್ಸ ನ್ಯಾಯದಿಂದ ನಿನಗ ನೀನೆ ಬಂದು ಆವದು ಬೇಡಿದ ವರಗಳನೀವೆನೆಂದು ಸುವಾಣಿಯಿಂದ ಎನ್ನ ಆದರಿಸಿದಿ ನಿನ್ನ ಔದಾರ್ಯ ತನಕಿನ್ನು ಆವದಾವದು ಸಮ ಶ್ರೀ ವತ್ಸಲಾಂಛನ ಗುರು ವಿಜಯ ವಿಠ್ಠಲ ನಿನ್ನ ಭಾವದಿಂದಲಿ ನೋಳ್ಪ ಭಾಗ್ಯವೇ ಪಾಲಿಸು

|| ೫ ||

ಜತೆ


ನಿನ್ನ ದರುಶನದಿಂದ ಅನಿಷ್ಟವನು ನಾಶ ಘನ್ನ ಇಷ್ಟ ರೂಪ ಗುರು ವಿಜಯ ವಿಠ್ಠಲ ಪ್ರಾಪ್ತ

 || ೬ ||

ಶ್ರೀ ಮೊದಲಕಲ್ ಶೇಷದಾಸರ (ಗುರುವಿಜಯವಿಠ್ಠಲರ) ಕೃತಿ

       || ಶ್ರೀ ಮಧ್ವೆಶಾರ್ಪಣಾಮಸ್ತು ||
***********