Showing posts with label ಶುದ್ಧಿ ತಿಳಿಯೋ ನಿನ್ನ ಬುದ್ಧಿ ದೈವತ್ವವನ್ನ mahipati. Show all posts
Showing posts with label ಶುದ್ಧಿ ತಿಳಿಯೋ ನಿನ್ನ ಬುದ್ಧಿ ದೈವತ್ವವನ್ನ mahipati. Show all posts

Wednesday, 1 September 2021

ಶುದ್ಧಿ ತಿಳಿಯೋ ನಿನ್ನ ಬುದ್ಧಿ ದೈವತ್ವವನ್ನ ankita mahipati

ಶುದ್ಧಿ ತಿಳಿಯೋ ನಿನ್ನ ಬುದ್ಧಿ ದೈವತ್ವವನ್ನ ಪ  


ಹೊರಗೆ ನೋಡಬ್ಯಾಡ ತಿರುಗಿ ನೋಡೊ ಮೂಢ ಸೆರಗು ಬಲುಗೂಢ ಬೆರಯೊ ನಿಜಗಾಢ 1 

ನಡೆ ಹೆಜ್ಜಿಮೆಟ್ಟಿ ಕೇಡಿಗ್ಯಾಗಿ ಕೆಟ್ಟ ನೋಡು ಮನಮುಟ್ಟಿ ಕೂಡು ನಿಜ ಘಟ್ಟಿ 2 

ಬುದ್ಧಮುಕ್ತವೇನು ದ್ವಂದ್ವ ತಿಳಿಯೋ ನೀನು ಹೊಂದಿಹೊಳೆವನು ತಂದೆ ಸದ್ಗುರು ತಾನು 3 

ಬುದ್ಧಿ ತಿಳಿಯದ್ಹೋಗಿ ಬಿದ್ಯೊ ಭವಕಾಗಿ ಶುದ್ಧಿ ಹೇಳಲಾಗಿ ಸದ್ಗುರು ನಿನಗಾಗಿ 4 

ತಿಳಿದು ನಿಜಗತಿ ನೆಲೆಯಾಗೊ ಮಹಿಪತಿ ಹೊಳೆವ ವಸ್ತುನೀತಿ ಬಲಿಯೊ ನಿಜಸ್ಥಿತಿ 5

***