Showing posts with label ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ hayavadana. Show all posts
Showing posts with label ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ hayavadana. Show all posts

Saturday, 1 May 2021

ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ ankita hayavadana

 ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ

ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ||


ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು

ವಾರಿಜದಳಲೋಚನಗಾರತಿಯನೆತ್ತಿದರೆ ||


ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ

ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದÀರೆ ||


ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ

ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ ||


ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ

ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ ||


ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ

ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ ||


ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ

ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ ||


ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ

ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ ||


ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ

ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ ||


ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ

ಭಾಸುರಸುರಮಯಪೀಠಗಾರತಿಯನೆತ್ತಿದರೆ||


ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ

ಕೇಶವ ನಾರಾಯಣಗಾರತಿಯನೆತ್ತಿದರೆ ||


ಸಕಲಸುರರನಾಳ್ದನಿಗೆ ನಿಖಿಳ ಖಳರ ಸೀಳ್ದನಿಗೆ

ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ ||


ಮತ್ಸ್ಯ ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ

ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ||


ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ

ಪಂಕಜಮುಖಿಯರು ಮಂಗಳಾರತಿಯೆತ್ತಿದರೆ ||


Mangaladeviyararasage tungamahima trivikramage

Anganeyaru sirirangagaratiyanettidare ||


Srirukumini modalada nariyarellaru neredu

Varijadala locanagaratiyanettidare ||


Muttina harivanadali ratnada salgala nerapi

Cittajanayyage mutttinaratiyanettidaàre ||


Cinnada harivanadali rannada salgala nerapi

Chennakesavanige cinnadaratiyanettidare ||


Hrudayada tamava geluvage sadugatipathava toruvage

Sudatiyarellaru mangalaratiyanettidare ||


Candada bushanamaniyolu nandadipagalella holeye

Ondanantava madikombagaratiyanettidare ||


Kandarpakotilavanyage saundaryavada murutige

Indumukiyarella mangalaratiyanettidare ||


Aganita gunasagarage nigamavandita vaibavage

Agakuladurage mangalaratiyenettidare ||


Nalitolgala nasunageya holeva kadaga kankanada

Sulalita kantige mangalaratiyettidare ||


Seshavanditapadage surekadigalodeyanige

Basurasuramayapithagaratiyanettidare||


Srisatiyappikondippage vasudevadivigrahage

Kesava narayanagaratiyanettidare ||


Sakalasuraranaldanige nikila kalara sildanige

Akutobayanige mangalaratiyanettidare ||


Matsya kurma varahanige kutsitarollada harige

Citsukarupage mangalaratiyanettidare||


Sankeyillada hayavadanage kimkaravarada sriharige

Pankajamukiyaru mangalaratiyettidare ||

****