Showing posts with label ಶಾಮಸುಂದರನೆ ನೀನು ಪ್ರೇಮಾದಿ ಕಾಯೊ sirivatsankita. Show all posts
Showing posts with label ಶಾಮಸುಂದರನೆ ನೀನು ಪ್ರೇಮಾದಿ ಕಾಯೊ sirivatsankita. Show all posts

Thursday, 5 August 2021

ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ankita sirivatsankita

 ..

kruti by ಚಿಕ್ಕೋಡಿ ಆಚಾರ್ಯ sirivatsankitaru (chikkodi acharyaru) 


ಶಾಮಸುಂದರನೆ ನೀನು ಪ್ರೇಮಾದಿ ಕಾಯೊ ಪ


ಧರೆಯೊಳು ನಾ ಬಂದು ಥರಥರದಲ್ಲಿ ನೊಂದು

ಮರುಗಿದೆ ತೋರ್ನಿನ್ನ ಚರಣಕಮಲವಾ 1


ಅನ್ಯನೆಂದರಿಯದೆ ನಿನ್ನವನೆಂದೆನ್ನ

ಮನ್ನಿಸಿ ಈಗಲೇ ಬನ್ನ ಬಿಡಿಸು ಬಾರೋ 2


ಶ್ರೀವತ್ಸಾಂಕಿತ ನೀನು ಶರಣಾಗತ ನಾನು

ಪೊರೆಯದೆ ಬಿಡುವದು ಥರವಲ್ಲ ಶ್ರೀಹರಿ

ಸರಸಿಜನಯನ ಬ್ಯಾಗ ಬಾರೊ ನಿನ್ನ 3

***