Showing posts with label ಅಂದೆ ನಿರ್ಣಯಸಿದರು ಕಾಣೋ purandara vittala. Show all posts
Showing posts with label ಅಂದೆ ನಿರ್ಣಯಸಿದರು ಕಾಣೋ purandara vittala. Show all posts

Tuesday, 3 December 2019

ಅಂದೆ ನಿರ್ಣಯಸಿದರು ಕಾಣೋ purandara vittala


ರಾಗ ಮೋಹನ. ಆದಿ ತಾಳ

ಅಂದೇ ನಿರ್ಣಯಿಸಿದರು ಕಾಣೋ
ಇಂದಿರಾಪತಿ ಪರದೈವವೆಂದು ||ಪ||

ಅಂದು ಚತುರ್ಮುಖ ನಾರದನಿಗೆ ತಮ್ಮ
ತಂದೆ ಶ್ರೀಹರಿ ಪರದೈವವೆಂದು
ಸಂದೇಹವ ಪರಿಹರಿಸಿದ ದ್ವಿತೀಯ
ಸ್ಕಂಧದೊಳೈದಧ್ಯಾಯದಲಿ||

ವೇದೋಪಾಸ್ಯಕ ವೇದ ವಿಧಾಯಕ
ವೇದಾತೀತಾನವನಂತೆ
ವೇದಾಕ್ಷರಗಳು ಹರಿನಾಮಗಳೆಂದು
ವೇದಾಂತ ಶ್ರುತಿಶಾಸ್ತ್ರಗಳಿಂದ ||

ಸಂದೇಹಾತ್ಮ ವಿನಾಶಸಹಿತನೆಂದು
ಸ್ಕಂಧಗಳೆಲ್ಲ ಸಾರುತಿರೆ
ತಂದೆ ಪುರಂದರವಿಠಲರಾಯನ
ಸಂದೇಹವ ಬಿಟ್ಟು ತುತಿಸೆಲೊ ಮನುಜ ||
****

pallavi

andE nirNayisidaru kANO indirApati paradaivavendu

caraNam 1

andu caturmukha nAradanige tamma tande shrIhari paradaivavendu
sandEhava pariharisida dvitIya skandhadoLaidadhyAyadali

caraNam 2

vEdOpAsyaka vEda vidhAyaka vEdAdItanavante
vEdAkSaragaLu harinAmagaLendu vEdAnta shruti shAstragaLinda

caraNam 3

sandEhAtma vinAsha sahitanendu skandhagaLella sArutire
tande purandara viTTala rAyana sandEhava biTTu tutiselo manuja
***


ಅಂದೆ ನಿರ್ಣಯಸಿದರು ಕಾಣೋ |
ಇಂದಿರಾಪತಿ ಪರದೈವತವೆಂಬುದ ಪ

ಅಂದು ಚತುರ್ಮುಖ ನಾರದನಿಗೆ ತನ್ನ |ತಂದೆ ಶ್ರೀಹರಿ ಪರದೈವವೆಂದು ||ಸಂದೇಹಗಳ ಪರಿಹರಿಸಿಹ ದ್ವಿತೀಯದಸ್ಕಂಧದೊಳಯ್ದನೆಯ ಅಧ್ಯಾಯದಲಿ 1

ಅಂದು ಕಪಿಲದೇವ ದೇವಹೊಲೆಗೆ ತಾನು |ಚೆಂದದ ತತ್ತ್ವವನೆಲ್ಲ ಬೋಧಿಸಿದ ||ಅಂದದಲರ್ಜುನ - ಉದ್ದವರಿಗೆ ಅಂದಾ - |ನಂದದಿ ಗೀತಾಶಾಸ್ತ್ರವನೊರೆದನೆಂದು 2

ವೇದೈಶ್ಚ ಸರ್ವೋರಹಮೇವ ವೇದ್ಯಃ |ವೇದವಿಧಾಯಕ ನಾಮದವನು ||ವೇದಾಕ್ಷರಗಳು ಹರಿನಾಮಗಳೆಂದು |ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು 3

ರಾಜಸ -ತಾಮಸ ಪೌರಾಣಗಳಿವು |ರಾಜಸ -ತಾಮಸ ಜೀವರಿಗೆ ||ರಾಜಸ -ತಾಮಸ ಗತಿಗೋಸ್ಕರ ಮುನಿ - |ರಾಜ ವ್ಯಾಸನು ಮೋಹಕವೆಂದು ಪೇಳಿದ 4

ಬಿಡು ಪಾಷಂಡಮತದ ದುರ್ಬುದ್ಧಿಯ |ಬಿಡದೆಮಾಡು ವೈಷ್ಣವಸಂಗವ ||ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |ಮೃಡಪ್ರಿಯ ಪುರಂದರವಿಠಲನೊಲಿವನೆಂದು 5
***