ನಾರಾಯಣ ನಾರಾಯಣ
ನಾರಾಯಣ ನಾರಾಯಣ ನಾರಾಯಣ| ನಾರಾಯಣ||ಪ||
ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ|
ರ್ವೋತ್ತಮನೆಂಬೋ ನೆನವಿರಬೇಕು||೧||
ಅರಿಷಡ್ವರ್ಗದ ವಿಜಯಬೇಕು ಗುರುಕುಲತಿಲಕ|
ಗುರುಮಧ್ವಮತ ಬೇಕು ಗುರುಭಕ್ತಿ ಬೇಕು||೨||
ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ|
ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು||೩||
ವೇದಭ್ಯಾಸವು ಬೇಕು ಅದರರ್ಥ ಹರಿಯೆಂಬ |
ಬೋಧವಿರಲುಬೇಕು ಖಳರಳಿಯಲುಬೇಕು||೪||
ವಾದಿರಾಜನೊಡೆಯ ಹಯವದನನ್ನ ದಿವ್ಯ|
ಪಾದ ನಂಬಿಯಿರಬೇಕು||೫||
********
ನಾರಾಯಣ ನಾರಾಯಣ ನಾರಾಯಣ| ನಾರಾಯಣ||ಪ||
ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ|
ರ್ವೋತ್ತಮನೆಂಬೋ ನೆನವಿರಬೇಕು||೧||
ಅರಿಷಡ್ವರ್ಗದ ವಿಜಯಬೇಕು ಗುರುಕುಲತಿಲಕ|
ಗುರುಮಧ್ವಮತ ಬೇಕು ಗುರುಭಕ್ತಿ ಬೇಕು||೨||
ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ|
ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು||೩||
ವೇದಭ್ಯಾಸವು ಬೇಕು ಅದರರ್ಥ ಹರಿಯೆಂಬ |
ಬೋಧವಿರಲುಬೇಕು ಖಳರಳಿಯಲುಬೇಕು||೪||
ವಾದಿರಾಜನೊಡೆಯ ಹಯವದನನ್ನ ದಿವ್ಯ|
ಪಾದ ನಂಬಿಯಿರಬೇಕು||೫||
********