Showing posts with label ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ramesha. Show all posts
Showing posts with label ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ramesha. Show all posts

Wednesday, 4 August 2021

ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ankita ramesha

 ..

ಮಂದಹಾಸನ ಮುಖವ ಸಖಿಯೆ ಎಂದು ಕಾಂಬೆನೆ ಒಂದೊಂದು ನಿಮಿಷ ಯುಗವಾಗಿ ರಂಗಯ್ಯ ಬಾರೊ ತಂಗಿ ನಾ ಹ್ಯಾಂಗಿರಬೇಕ ಪ.


ಒಂದಿನ ಸುಭದ್ರ ಮಂದಿರದೊಳು ಕುಳಿತುತಂದೆಯ ಭಾಗ್ಯ ಸ್ಮರಿಸುತ ಹಿಗ್ಗುತ ತಂದೆ ಭಾಗ್ಯ ಸ್ಮರಿಸುತ ಹಿಗ್ಗುತ ಇಂದಿರಾಪತಿ ನೆನೆದಾಳ 1

ಹೆಣ್ಣು ಸುಭದ್ರ ತಮ್ಮ ಅಣ್ಣನ ಭಾಗ್ಯವಬಣ್ಣ ಬಣ್ಣದಲೆ ಸ್ಮರಿಸುತಬಣ್ಣ ಬಣ್ಣದಲೆ ಸ್ಮರಿಸುತ ಹಿಗ್ಗುತ ಕಣ್ಣು ಮುಚ್ಚುತಲೆ ತೆರೆಯುತಲೆ2

ತಿಂಗಳಿಗೆ ಸುಭದ್ರಾ ಬಂದೆನ ನಿನ್ನ ನೋಡಲುಒಂದೇ ಮನದಿಂದ ಇರುಯೆಂದಒಂದೆ ಮನದಿಂದ ಇರುಯೆಂದ ಕಳುಹಿದ ಇಂದೆನ್ನ ಮನಸ್ಸು ಕಲಕಿತ 3

ಕೈವಲ್ಯಪತಿಯ ದಯದಿಂದ ಸಲುಹಿದವೈಭವದೊಳಗÀÉ ಮರೆತಾನವೈಭವದೊಳಗÀÉ ಮರೆತಾನ ಮುಯ್ಯವ ಒಯ್ದರೆ ನೋಡಿ ಬರಬೇಕ 4

ಕೃಷ್ಣರಾಯರ ಮನೆಯ ಅಷ್ಟೈಶ್ವರ್ಯವಎಷ್ಟು ವರ್ಣಿಸಲ್ವಶವಲ್ಲಎಷ್ಟು ವರ್ಣಿಸಲ್ವಶವಲ್ಲ ಮುಯ್ಯವ ಒಯ್ದರ ನೋಡಿ ಬರಬೇಕ 5

ಗೊಲ್ಲಾಧೀಶನ ಭಾಗ್ಯ ಚಲುವಿ ಸುಭದ್ರಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತಸೊಲ್ಲುಸೊಲ್ಲಿಗೆ ನುತಿಸುತ ಹಿಗ್ಗುತ ಎಲ್ಲರ ಮನಸ್ಸು ಎರಗೀತ6

ಗೋಕುಲೇಶ ರಾಮೇಶ ಯಾಕೆ ಮಥುರೆ ಬಿಟ್ಟವಾಕ್ಕುಪೇಳೆಂದು ವನಿತೆಯರುವಾಕ್ಕುಪೇಳೆಂದು ವನಿತೆಯರು ನುಡಿಯಲುಸಾಕಲ್ಯದಿಂದ ತಿಳಿಸಿದಳು7

****