Showing posts with label ಕರುಣಸಾಗರನಹುದೊ ಶರಣಜನರ ಪ್ರಿಯ mahipati. Show all posts
Showing posts with label ಕರುಣಸಾಗರನಹುದೊ ಶರಣಜನರ ಪ್ರಿಯ mahipati. Show all posts

Wednesday, 11 December 2019

ಕರುಣಸಾಗರನಹುದೊ ಶರಣಜನರ ಪ್ರಿಯ ankita mahipati

ಜೀವನಪುರಿ ರಾಗ ತೀನ್ ತಾಳ

ಕರುಣಸಾಗರನಹುದೊ ಶರಣಜನರ ಪ್ರಿಯ ||ಪ||

ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ
ದುರಿತ ಬಂದಡರಿದ ಅವಸರದೊಳು ನೀ
ಪರಿಹರಿಸಿದ್ಯೊ ಶ್ರಮ ಪರಮದಯಾಳ ||೧||

ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೋ ಪೂರ್ಣ
ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ
ಪರಿಪರಿ ಕಾಯಿದ್ಯೊ ತರಳ ಪ್ರಹ್ಲಾದನ ||೨||

ಧರ್ಮಪತ್ನಿಯ ಸೆರಗ ಭರದಿಂದೆಳೆಯುವ ಸಮಯ
ಸ್ಮರಣಿ ಒದಗಿ ಬಂದ್ಯೊ ಪರಿಪರಿ ವಸ್ತುವ
ಪೂರಿಸಿದ್ಯೊ ಶ್ರೀಹರಿ ಕೃಷ್ಣ ಕೃಪಾಳು ||೩||

ಅರಗಿನ ಮನೆಯೊಳು ಮರೆಮೋಸ ಮಾಡಿರಲು
ದೋರಿ ವಿವರದಿಂದ ಪೊರವೊಂದಿಸಿದ್ಯೋ ಸ್ವಾಮಿ
ಶರಣಾಗತವತ್ಸಲ ಪಾಂಡವಪ್ರಿಯ ||೪||

ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ
ಬಾಲಕ ಮಹಿಪತಿಯ ಪಾಲಕ ನೀನಹುದೊ
ಮೂಲೋಕದೊಡೆಯ ಶ್ರೀಹರಿದಯಾಳು ||೫||
***

ಕರುಣಸಾಗರನಹುದೊ ಶರಣ ಜನರ ಪ್ರಿಯ   ಪ

ಕರಿರಾಜ ಮೊರೆ ಇಡಲು ಭರದಿಂದೊದಗಿ ಬಂದ್ಯೊ ದುರಿತ ಬಂದಡರಿದಾವಸರದೊಳು ನೀ ಪರಿಹರಿಸಿದ್ಯೊ ಶ್ರಮ ಪರಮ ದಯಾಳು 1 
ದುರಿತ ನಿರ್ಮಿಸಿದವನ ಬೆರಳಲಿ ಸೀಳಿದ್ಯೊ ಪೂರ್ಣ ಹರಿಯಂದಾ ಮಾತಿಗೆ ಕರುಣದಿಂದೊದಗಿ ನೀ ಪರಪರಗಾಯಿದ್ಯೊ ತರಳ ಪ್ರಹ್ಲಾದನ 2 
ಧರ್ಮಪತ್ನಿಯ ಸೆರಗೆ ಭರದಿಂದೆಳೆಯುವ ಸಮಯ ಸ್ಮರಣಿ ಒದಗಿ ಬಂದೊ ಪರಿಪರಿ ವಸ್ತುವ ಪೂರಿಸಿದ್ಯೊ ಶ್ರೀ ಹರಿ ಕೃಷ್ಣ ಕೃಪಾಳು 3 
ಅರಗಿನ ಮನೆಯೊಳು ಮರೆ ಮೋಸ ಮಾಡಿರಲು ಶರಣಾಗತವತ್ಸಲ ಪಾಂಡವಪ್ರಿಯ 4 
ಹಲವು ಪರಿಯಲೆನ್ನ ಸಲಹುವ ಸದ್ಗುರುಪೂರ್ಣ ಬಾಲಕ ಮಹಿಪತಿಯ ಪಾಲಕ ನೀನಹುದೊ ಮೂಲೋಕದೊಡೆಯ ಶ್ರೀ ಹರಿ ದಯಾಳ 5
***