Showing posts with label ದಾಸರಾಯರ ನೋಡಿದ್ಯಾ ಶ್ರೀಶ ಪ್ರಾಣೇಶ ದಾಸರಾಯರ tirupati vittala shreeshapranesha dasa stutih. Show all posts
Showing posts with label ದಾಸರಾಯರ ನೋಡಿದ್ಯಾ ಶ್ರೀಶ ಪ್ರಾಣೇಶ ದಾಸರಾಯರ tirupati vittala shreeshapranesha dasa stutih. Show all posts

Sunday, 1 August 2021

ದಾಸರಾಯರ ನೋಡಿದ್ಯಾ ಶ್ರೀಶ ಪ್ರಾಣೇಶ ದಾಸರಾಯರ ankita tirupati vittala shreeshapranesha dasa stutih

 ..

ತಿರುಪತಿವಿಠಲರ ಹಾಡು


ದಾಸರಾಯರ ನೋಡಿದ್ಯಾ | ಶ್ರೀಶ ಪ್ರಾಣೇಶ |ದಾಸರಾಯರ ನೋಡಿದ್ಯಾ ||ದಾಸರಾಯರ ಪಾದಾಶ್ರಯವ ಮಾಡಲು |ದೋಷಗಳೋಡಿಸಿ ಶ್ರೀಶನೊಲಿಸಿ ಕೊಡುವ ಪ


ಸ್ನಾನದಿ ಮಹಮಂತ್ರವ | ನಿತ್ಯದಿ ಮಾಡಿ |ಜ್ಞಾನಪೂರ್ವಕ ಜಪವು ||ದ್ಯಾನದಿ ಬಿಂಬನ ಹವಣಿ ಮನದಿಂದ |ಮೌನದಿ ಪೂಜಿಸ್ವಾನಂದದೊಳಿರುವಂಥ 1


ಸತತ ಶ್ರೀ ಹರಿಯ ನಾಮ | ಸ್ಮರಣೆಯೊಳು |ರತರಾಗಿಕೊಂಡು ಪ್ರೇಮ ||ಗತಿಗೆ ನೀನೆ ಜಗತ್ಪತಿಯೆಂದು ನಿಶ್ಚಯ |ಮತಿವುಳ್ಳ ಮಹಿಮನ ತುತಿಸುವ ಗುರುಗಳ 2


ಮೊದಲರ ಪದ್ಧತಿಯ | ತಿಳಿದು ಮಾಡೆ |ಪದುಮನಾಭನ ಸೇವೆಯು ||ಪದ ಸುಳಾದಿಗಳರ್ಥ | ಮುದದಿ ಕೇಳುತ ಜಗ |ದುದರ ತಿರುಪತಿ ವಿಠಲನ್ನೆನದು ನಲಿವ ಮುದ್ದು 3

***