RSS song
ಪರಶಿವಾಲಯ ವರ ಹಿಮಾಲಯ ಜ್ವಲಿಸು ಒಡಲಿನ ಜ್ವಾಲೆಯ
ಹಿರಿಮೆ ಮಹಿಮೆಯ ಓ ನಗಾಧಿಪ ದಹಿಸು ನಾಡಿನ ವೈರಿಯ ||ಪ||
ಸತ್ತು ಮಲಗುತ ನೆತ್ತರಿತ್ತರು ಎನಿತೊ ಸಾಸಿರ ಯೋಧರು
ತಮ್ಮ ನೆಲದೊಳೆ ಹೆಮ್ಮೆ ಛಲದೊಳೆ ಮಾತೆಗರ್ಪಿತರಾದರು
ಅತ್ತ ಹೆಣ್ಣಿನ ಕಣ್ಣ ನೀರಿದೆ ಹೆತ್ತ ಒಡಲದು ಚೀರಿದೆ
ಸುರಿದ ನೆತ್ತರ ಸೇಡಿನುತ್ತರ ನೀಡಿರೆನ್ನುತ ನರಳಿದೆ ||೧||
ವೀರ ದಾಹಿರನೊಡನೆ ಬಾಳಿದ ಸಿಂಧು ದೇಶದೊಳಡಗಿದ
ಖಡ್ಗ ಬಂಧುವೆ ಸೀಳು ದಾಸ್ಯವ ಏಳು ಮೇಲಕೆ ನೆಗೆಯುತ
ಪೃಥ್ವಿರಾಜನ ಸಮರಸಿಂಹನ ಕೂಡಿ ಮ್ಲೇಚ್ಛರ ಕಡಿಯುತ
ಮೆರೆದ ಲೋಹವೆ ದಾಹ ನಿನ್ನದು ತಣಿವ ಕ್ಷಣವಿದೊ ಬಂದಿದೆ ||೨||
ಕಾಲ್ಪಿ ಝಾನ್ಸಿಯ ಮಣ್ಣೊಳಡಗಿದ ದಾಹದಲಿ ಬಾಯಾರಿದ
ರಕ್ತಸ್ನಾನದ ಬಯಕೆ ತೀರದ ಪೂರ್ವಜರ ಪರಿವಾರದ
ತಾಂತ್ಯ ನಾನಾ ಕುವರಸಿಂಹರ ಕರದೊಳಾಡಿದ ಕುಶಲರೆ
ನೂರು ವರ್ಷದ ನಿದ್ದೆ ಇಂದಿಗೆ ಸಾಕು ಲೋಹದ ಗೆಳೆಯರೆ ||೩||
ನಮ್ಮ ಹಿಮನಗ ನಮ್ಮ ನೆಲ ಜಲ ಎಂದು ನುಡಿವುದೇ ನಾಲಿಗೆ?
ಶ್ರದ್ಧೆ ಭಕ್ತಿಯ ಕಾರ್ಯಕಿಳಿಸುವ ಬಲವಿಹುದೆ ಕೈಕಾಲಿಗೆ?
ನಮ್ಮದಾಗಿಹ ತೀರ್ಥಕ್ಷೇತ್ರವ ತುಳಿಯುತಿರಲರಿರಕ್ಕಸ
ಎದ್ದು ನಿಲ್ಲಲಿ ಗ್ರಾಮಗ್ರಾಮದ ರಾಮಲಕ್ಷ್ಮಣ ತಾಪಸ ||೪||
ಮೂರು ದಿಕ್ಕಿನ ಕಡಲ ತಡಿಯಿಂದೋಡಿ ಬನ್ನಿರಿ ಬನ್ನಿರಿ
ಮಲಗಿದುಕ್ಕಿನ ತುಕ್ಕನೊರೆಸುತ ಗೆಲುವು ನಿಶ್ಚಿತವೆನ್ನಿರಿ
ಯಾವ ಮಾತೆಯ ಯಾವ ಮಣ್ಣಿನ ಮಕ್ಕಳೆಂಬುದ ತೋರಿರಿ
ಬಲಿಗೆ ಹಸಿದಿಹ ಶಸ್ತçಹಿರಿಯುತ ಶತ್ರುಸೇನೆಯನಿರಿಯಿರಿ ||೫||
***