..
kruti: tandevaradagopala vittala (ಪ್ರಹ್ಲಾದಗೌಡರು)
ಸಾಕು ಸಾಕು ಈ ಜನಸಂಗ ಪ
ಅದರಿಂದ ಆಗೋದು ವಿಚಾರ ಭಂಗಾ ಅ.ಪ.
ನಾಲ್ಕಾರು ತತ್ವಮಾತಿಗೆ ಮರುಳ್ಯಾಗಬ್ಯಾಡ ನಿನ್ನೊಳು ನೀನಾಗಿ ತಿಳಿದುಕೋ ಗಾಢಾನಿನಗೆ ನಾನರುಹುವೆ ಅವರ ಮನೋವೃತ್ತಿ ಗೂಢಾಅನಿಮಿತ್ತವಾಗಿ ಸರಸದಿ ಬಂದು ವಿರಸವ ಮಾಡೋರು ಮೂಢಾ 1
ಪಿರಿಯರು ಪೇಳಿದ ವಾಕ್ಯವನ್ನು ಗ್ರಹಿಸಿ ತ್ಯಜಿಸೋದು ಸತ್ಕರ್ಮ ಬಾಹ್ಯ ವಳಗೆ ನೋಡಲು ತುಂಬಿದೆ ವಿಷಯರಾಶಿ ಜೀಯಾ ಆದ್ದರಿಂದ ನಿನಗೆ ಬೇಡಿಕೊಂಡು ಮುಗಿವೆ ನಾ ಕೈಯ್ಯಾ2
ಸಂತರ ಸಂಗ ಮಾಡಬೇಕು ಅದು ಹ್ಯಾಗೆಂದರೆ ಕಂತೆಯೊಳಗೆ ಉಳ್ಳವರಾಗಬೇಕು ಸಂತೆ ಜನರ ಭಂಗಾ ತಾಳಲು ಬೇಕು ನಮ್ಮ ಸಂತತ ಸುರ ತಂದೆವರದಗೋಪಾಲವಿಠಲನ ದಯಬೇಕು 3
***