Vijaya dasara rachane
ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ |
ತಿಂಗಾದಿ ಪಿದಿದೆನು ಸಲಸಲ ಪೋಗಿ |
ಗಂಗಿಯ ತಿದೆಯಲ್ಲಿ ಆದಿ ಬಂದೇನು ಪ
ಕುಕುಕೊಲ್ಲೆ | ತಾಯಿಹಾಲು ಕುದಿದೇನು |
ಗೋಕುಲ ಮಕ್ಕಳ ಕೂದಾ ಕಲಿತು |
ಕಾಕಾಕೋಲು ಹೊದಾದೆನೆ 1
ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ |
ಉಂದೇನು ಕಲ್ಲಿಯ ಬುತ್ತಿಯ ಮತ್ತೆ |
ಹಿಂದಾಕಲುಗಳ ಕಾದು ತಂದೆನೊ 2
ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ|
ತಪ್ಪಿಗೆಯಿದಸೆ ಅಪ್ಪಗೆ ಪೇಳಿ
ವಪ್ಪುಗದಲಿ ವುದಿಕಲಿ ಕತ್ತೆ 3
ಅಮ್ಮ ನೀ ತಿಂದೆನೆ ಯಿತ್ತು ಯೆಂಣೆ ಮೆದ್ದೆನೆ |
ವಮ್ಮೆ ತತಕು ಮೊಸಲು ಸುರಿದೇನು |
ತಮ್ಮನ ತೊತ್ತಿಯಿಂದಾ ಯಿಲೆಸೆ 4
ಈ ಲೀಲೆಯ ನೋಡಿ ಮಗನ ತೋಳಲಿ ಬಿಗಿದಪ್ಪಿ |
ಮೂಲೋಕದರಸ ವಿಜಯವಿಠ್ಠಲ
ಆಲಯ ಪಾವನವೆಂದಳೆ ಗೋಪಿ 5
***