Showing posts with label ಏಳು ಶ್ರೀ ಗುರುರಾಯ ಏಳು ಪರಮಪ್ರಿಯ gopalakrishna vittala. Show all posts
Showing posts with label ಏಳು ಶ್ರೀ ಗುರುರಾಯ ಏಳು ಪರಮಪ್ರಿಯ gopalakrishna vittala. Show all posts

Sunday 1 August 2021

ಏಳು ಶ್ರೀ ಗುರುರಾಯ ಏಳು ಪರಮಪ್ರಿಯ ankita gopalakrishna vittala

ಏಳು ಶ್ರೀ ಗುರುರಾಯ ಏಳು ಪರಮಪ್ರಿಯ

ಏಳು ಮಂಗಳಕಾಯ ಭಕ್ತಜನಪ್ರಿಯ ಏಳಯ್ಯ ಬೆಳಗಾಯಿತು ಪ.


ಬಳಲಿ ಬಂದಿರುವಂಥ ಬಾಲ ಶಿಷ್ಯಂದಿರನು

ಸುಲಲಿತದ ಪ್ರಿಯ ವಾಕ್ಯದಿಂದ ಸಂತೈಸಿ

ಮಲಿನ ಮನವನೆ ತಿದ್ದಿ ಸುe್ಞÁನ ಬೋಧಿಸಿ

ನಳಿನನಾಭನ ಪಾದಕೊಪ್ಪಿಸಲಿಬೇಕು 1

ಶುದ್ಧಾಂತಃಕರಣದಿಂ ಪೊದ್ದಿರುವ ಶಿಷ್ಯರನು

ಉದ್ಧಾರಗೈಯಲಂಕಿತಗಳಿತ್ತು

ಮಧ್ವಶಾಸ್ತ್ರದ ಸಾರ ತತ್ವಾಮೃತವನುಣಿಸಿ

ಪದ್ಮನಾಭನ ದಾಸರೆಂದೆನಿಸಬೇಕು 2

ಎದ್ದು ಸ್ನಾನವಗೈದು ತಿದ್ದಿ ನಾಮವನ್ಹಚ್ಚಿ

ಪದ್ಮಾಕ್ಷಿ ತುಳಸಿ ಮಾಲೆಗಳ ಧರಿಸಿ

ಗದ್ದುಗೆಯೊಳು ಕುಳಿತು ಹೃದ್ವನಜಸ್ಥಾನ

ಪದ್ಮಪಾದವ ಮನದಿ ಸ್ಮರಿಸಬೇಕು 3

ಹಿಂದ್ಯಾರು ಪೊರೆದರು ಮುಂದ್ಯಾರು ಕಾಯ್ದರು

ತಂದೆ ನೀವಲ್ಲದಿರೆ ಪೊಂದಿದರಿಗೆ

ತಂದೆ ಮುದ್ದುಮೋಹನದಾಸವರ ಎಮ್ಮೊಳು

ಕುಂದನೆಣಿಸದೆ ಕಾಯೊ ಕರುಣಾಳು ಗುರುವೆ 4

ಅಪಾರಮಹಿಮನೆ ಆಪನ್ನ ರಕ್ಷಕನೆ

ಗೋಪಾಲಕೃಷ್ಣವಿಠ್ಠಲನಂಘ್ರಿ ಕಮಲ

ಕೃಪಾಳು ತೋರು ನೀ ಕೃಪೆಮಾಡು ಕಣ್ತೆರದುಶ್ರೀ ಪದ್ಮಜಾತರೊಂದಿತನ ದಾಸಾರ್ಯ 5

***