Showing posts with label ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು purandara vittala. Show all posts
Showing posts with label ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು purandara vittala. Show all posts

Thursday, 5 December 2019

ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು purandara vittala

ರಾಗ ನಾದನಾಮಕ್ರಿಯೆ 

ತೆಗೆ ನಿನ್ನ ಮುಸುಕವನು ||ಪ||
ತೆಗೆ ನಿನ್ನ ಮುಸುಕವ ನಗುತುಂಬೆ ಮೊಲೆಯನು
ಜಗವನೆಲ್ಲವ ತಿರುಗಿ ಬಾಯಾರಿ ಬಂದೆನು ||ಅ||

ಗೋವ ಕಾಯಲು ಪೋಗಿ
ಧಾವತಿಪಟ್ಟು ಬಹು
ದೇವಕಿದೇವಿಯೆ
ಈವಾಗ ಬಂದೆನು ||

ಕಾಳಿಯ ಮಡುವಿಲಿ
ಏಳು ಹೆಡೆಯ ಮೇಲೆ
ಕಾಳಿಂಗನ ತುಳಿದು
ಭಾಳ ಶ್ರಮದಿ ಬಂದೆ ||

ಉಟ್ಟ ಸೀರೆಯ ಬಿಟ್ಟು
ದಿಟ್ಟ ಬಾಲೆಯರಿರಲು
ಥಟ್ಟನೆ ಸೆಳೆದೊಯ್ದು
ಕಷ್ಟ ಬಟ್ಟೆ ಮರವೇರಿ ||

ವಿಷದ ಮೊಲೆಯನುಂಡು
ಕಸವಸಿಬಡುತಿಹೆ
ನಸುನಗೆಯಲಿ ಉಂಬೆ
ಹಸಿವೆ ಬಹಳಾಗಿದೆ ||

ತ್ವರದಿ ತೊಡೆಯ ಮೇಲೆ |
ಕರೆದು ಕೂಡಿಸು ತಾಯಿ
ಪುರಂದರವಿಠಲ
ವರದ ಸರ್ವೋತ್ತಮಗೆ ||
**********