ಕೋಸಲಾಧಿಪ ಶುಭವನು ದಾಶರಥೇ ll ಪ ll
ದಾಸನಲ್ಲಿ ಕೃಪಾಲೇಶವ ಬೀರೆಲೊ ll ಅ ಪ ll
ಹರನ ಚಾಪವ ಮುರಿದು ಸ್ವಯಂ
ವರದಿ ಜಾನಕಿ ಕರವ ಪಿಡಿದು
ಸುರನರರನು ಹರುಷಪಡಿಸಿದ
ಸರಸಿಜಲೋಚನ ಕಾಯೊ ಕರುಣದಲಿ ll 1 ll
ವನವ ಸೇರಿ ಮುನಿಗಳ ಶಂ
ಸನವ ಪೊಂದಿದ ಜಾನಕೀಪತಿ
ಮುನಿದು ದುರುಳರ ಹನನ ಮಾಡಿದ
ಹನುಮನಿಗೆ ದರುಶನವಿತ್ತ ll 2 ll
ವಾನರಬಲದಿಂದ ಕೂಡಿ
ವನದಿ ಬಂಧಿಸಿ ಲಂಕೆ ಸೇರಿದ
ಶಾನನ ಮುಖರನು ಕೊಂದು
ಜಾನಕಿಯಲಿ ಪ್ರಸನ್ನನಾದ ll 3 ll
***