ಕಾಖಂಡಕಿ ಶ್ರೀ ಕೃಷ್ಣದಾಸರು
ಇನ್ನಾರೆ ನೆರೆ ತಿಳಿ ನಿಜ ಹಿತವನು ಪ
ಇನ್ನಾರೆ ನೆರೆ ತಿಳಿ ನಿಜ ಹಿತವನು | ನಿನ್ನೊಳು ನೀನು ಮರಳು ಮನವೇ | ತನ್ನ ಹಿತವ ತಾ ನರಿಯದೆ ಮರೆದು | ದಣ್ಣನೆ ದಣಿವುದು ಸುಖದನುವೇ 1
ಸಂತರಿಗೆರಗಿ ಶರಣವ ಮಾಡಿ | ಸದ್ಭೋಧ ಕೇಳಲು ಬೇಸರಿಕೆ | ಪಂಥದಿ ಲೆತ್ತ ಪಗಡಿ ಜೂಜೂ ಮಂಡಿಸಿ | ಎಂದಿಗೆ ದಣಿಯೇ ನೀ ವಂದಿನಕೆ 2
ಒಂದರೆ ಘಳಿಗೆಯ ಹರಿಕಥೆ ಮಾಡುವ | ಸ್ಥಳದಲಿ ಕೂಡಲು ತೂಕಡಿಕೆ | ಛಂದದಿ ಹಾಸ್ಯ ಕುವಿದ್ಯಗಳಾಟವ | ನೋಡುದರಲಿ ಮಹಾ ಎಚ್ಚರಿಕೆ 3
ಪಥ | ಅನುಸರಣಿಯೊಳಗೆ ನಿರ್ಭಯವು | ಧನ ಧರ್ಮದಂಧರ ಮನಸವ ಹಿಡಿಯಲು | ಕಾಶಿನ ಆಶೆಗೆ ಬೆಜ್ಜರವು 4 ತೃಷೆಯದ ಕಾಲಕೆ ಬಾವಿ ತೋಡುವೆನೆಂಬಾ | ವನ ಪರಿಯಲಿ ಮತಿವಿಡಿಯದಿರು | ವಸುಧಿಲಿ ಮಹಿಪತಿ ನಂದನ ಪ್ರಭುವಿನ | ಶರಣ ಹುಗಲು ದಿನ ಗಳೆಯದಿರು 5
***