ಯೋಗಿಂದ್ರ ತೀರ್ಥರು stutih
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೇಂಕಟನಾಥ
ಯೋಗಿವರ್ಯ ಯೋಗಿಂದ್ರಾಚಾರ್ಯ ।
ಯೋಗಿ ಚಂದ್ರ ರಾಘವೇಂದ್ರಾರ್ಯ ಕುವರ ।। ಪಲ್ಲವಿ ।।
ವೆಂಕಟನಾರಾಯಣಾರ್ಯರ ಸುತನೇ ನಮೋ ।
ವೆಂಕಟನಾಥಾರ್ಯರ ಪೌತ್ರನೇ ನಮೋ ।
ವೆಂಕಣ್ಣಾರ್ಯ ನಾಮಾಂಕಿತನೇ ನಮೋ ।
ವೆಂಕಟೇಶನ ಕಾರುಣ್ಯ ಪಾತ್ರ ನಮೋ ನಮೋ ।। ಚರಣ ।।
ಗುರು ರಾಘವೇಂದ್ರ ಕರಸಂಜಾತ ನಮೋ ।
ಗುರು ಯೋಗೀ೦ದ್ರನೆಂದು ಮೆರೆದವನೇ ನಮೋ ।
ಗುರು ಮಧ್ವ ಸಾಮ್ರಾಜ್ಯದಿ ವಿರಾಜಿಸಿದವನೇ ನಮೋ ।
ಗುರು ಸೂರೀ೦ದ್ರ ಪಿತನೇ ನಮೋ ನಮೋ ।। ಚರಣ ।।
ಶ್ರೀರಂಗ ಕ್ಷೇತ್ರದಿ ಕಾವೇರಿ ತೀರ ವಾಸ ನಮೋ ।
ಶ್ರೀರಂಗದ ಮೂಲ ಬೃಂದಾವನದಿ ಶೋಭಿಪನೇ ನಮೋ ।
ಶ್ರೀರಂಗ ಮೂಲರಾಮನ ಧ್ಯಾನಿಪನಿಗೆ ನಮೋ ।
ಶ್ರೀರಂಗ ವೇಂಕಟನಾಥನಾರಾಧಕನೇ ನಮೋ ನಮೋ ।। ಚರಣ ।।
****
" ವಿಶೇಷ ವಿಚಾರ "
" ವೆಂಕಟನಾರಾಯಣಾರ್ಯರ ಸುತನೇ "
ಈ ಶ್ರೀ ವೆಂಕಟನಾರಾಯಣಾಚಾರ್ಯರು,ಶ್ರೀ ವೀಣಾ ತಿಮ್ಮಣ್ಣಭಟ್ಟರ ಪುತ್ರರಾದ ಶ್ರೀ ವೀಣಾ ಗುರುರಾಜಾಚಾರ್ಯರ ಮಕ್ಕಳು.
" ಶ್ರೀ ವೆಂಕಟನಾಥಾರ್ಯರ ಪೌತ್ರರು "
ಶ್ರೀ ರಾಯರ ಪೂರ್ವಾಶ್ರಮ ಸಹೋದರರಾದ ಶ್ರೀ ವೀಣಾ ಗುರುರಾಜಾಚಾರ್ಯರ ಮೊಮ್ಮಕ್ಕಳು ಆದ್ದರಿಂದ ಶ್ರೀ ರಾಯರಿಗೂ ಪೂರ್ವಾಶ್ರದಲ್ಲಿ ಮೊಮ್ಮಕ್ಕಳು ( ಶ್ರೀ ಯೋಗೀ೦ದ್ರತೀರ್ಥರು )
ಗುರು ವಿಜಯ ಪ್ರತಿಷ್ಠಾನ
****