ಪಾಲಿಸೊ ಪಾರ್ವತಿ ರಮಣ || ಪ ||
ಮಲ್ಲಿಕಾರ್ಜುನ ಶ್ರೀಶೈಲ ಸದನ
ಪುಲ್ಲನಾಭ ಹರಿಕಥಾ ಬೋಧನ ||ಅಪ||
ಫಾಲ ನಯನ ಶುಂಡಾಲ ಚರ್ಮಧರ
ಹಾಲಾಹಲವನು ಪಾನಗೈದ ಹರ
ಮಾಲೋಲೆಯು ಕರ ಕಪಾಲ ತುಂಬಲು
ವಾಲೋಗರದೋಳ್ ಭಜಕರ ಸಲಹಿದಿ || ೧ ||
ನಂದಿಗಮನ ಬಲು ಸುಂದರಿ ಸಂಗನ
ವಂದಿತ ಮನಕಾನಂದದಾತ ಘನ
ಬಂದೆ ನಂಬಿ ಗುರುವೆನ್ನುತ ನಿನ್ನ
ಇಂದೆನಗೆ ದಯ ಮಾಡೋ ಮುನಿ ಮನಾ || ೨ ||
ಕರ್ಪೂರ ಗೌರವದಂಗ ಚಂದ್ರ ಶಿರ
ಸರ್ಪಭೂಷಣ ಶಿವ ಅಂಗಜ ಮರ್ದನ
ಅರ್ಪಿಸಿಕೊಂಬ ಭಕುತರಿಗೊಲಿವ
ಸರ್ಪಶಯನ ಪ್ರಸನ್ವೇಂಕಟ ಪ್ರೀಯ || ೩ ||
***
paaliso paarvati ramaNa || pa ||
mallikaarjuna shrIshaila sadana
pullanaabha harikathaa bOdhana ||apa||
Paala nayana shuMDaala carmadhara
haalaahalavanu paanagaida hara
maalOleyu kara kapaala tuMbalu
vaalOgaradOL bhajakara salahidi || 1 ||
naMdigamana balu suMdari saMgana
vaMdita manakaanaMdadaata ghana
baMde naMbi guruvennuta ninna
iMdenage daya maaDO muni manaa || 2 ||
karpUra gouravadaMga chaMdra shira
sarpabhUShaNa shiva aMgaja mardana
arpisikoMba bhakutarigoliva
sarpashayana prasanvEMkaTa prIya || 3 ||
***