Showing posts with label ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ kadarundalagihanumaiah. Show all posts
Showing posts with label ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ kadarundalagihanumaiah. Show all posts

Tuesday, 3 August 2021

ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ ankita kadarundalagihanumaiah

>>

ಹಲವು ಚಿಂತೆ ಮರೆವುತಿದೆ ಹರಿ ನೆನೆದರೆ ನಮ್ಮ

ಕುಲವೆ ಉದ್ಧಾರವಾಗುವ ಕಾಲವೊ ಪ


ಕೊಲೆ ಅನೃತ ಕಳವು(ದಶಬಾರ ಪಟ್ಟಾರ) [?]

ಸಲೆ ಬಯಸಿ ಸರ್ವರಲಿ ನೆನೆವುತಿದ್ದೆ

ಒಲಿದು ವೈಕುಂಠಪತಿ ಒಮ್ಮೆ ನೆನೆದರೆ ಮನಕೆ

ಬಲು ಹರುಷವಾಗುವ ಭಾಗ್ಯವೆಲ್ಯೊದಗಿತೊ 1


ಸತ್ಕರ್ಮಗಳ ಲೇಶ ಸ್ವಪ್ನದಲಿ ತಿಳಿಯದು

ಮತ್ತತನದಲಿ ನಡೆದ ಮೂರ್ಖನಿಗೆ

ಎತ್ತಲಿಂದೊದಗಿತೊ ಎನಗೆ ತಿಳಿಯದು ದೇವ

ಉತ್ತಮನ ನೆನೆನೆನೆದು ಉಬ್ಬೇರುತಿಹದೊ 2


ಬಂದ ಕಾರ್ಯವ ಬಿಟ್ಟು ಮಂದಮತಿತನದಿಂದ

ಬೆಂದ ದುರ್ವಿಷಯದಲಿ ಬಳಲುತಿದ್ದೆ

ತಂದೆ ಕದರುಂಡಲುಗಿ ಹನುಮಯ್ಯನಾ ಪಾದ

ಹೊಂದಿದಾ ನೆವದಿಂದ ಹೊಸ ಪರಿಯ ಕಂಡೆ 3

****