ಕಾಲಿಂಗಡಾ ರಾಗ ದೀಪಚಂದಿ ತಾಳ
ಕೊಂಡಿರ್ಯಾ ನೀವು ಕೊಂಡಿರ್ಯಾ
ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ||
ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧||
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨||
ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩||
ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪||
ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫||
ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬||
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭||
ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮||
ಒಮ್ಮನವಾದರೆ ಸುಮ್ಮನೆ ಬಾಹುದು ||೯||
ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ಸಾರಿ ಚಲ್ಲಿದ ಮಹಿಪತಿ ವಸ್ತುಮಯವಿದು ||೧೧||
***
ಕೊಂಡಿರ್ಯಾ ನೀವು ಕೊಂಡಿರ್ಯಾ
ಮಂಡಲದೊಳು ವಸ್ತು ಕೊಂಡಿರ್ಯಾ ||ಧ್ರುವ||
ಕೊಳಬೇಕಾದರೆ ನೀವು ತಿಳಿದುಕೊಂಡು ಬನ್ನಿ ||೧||
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ ||೨||
ಬೆಲೆಯು ಹೇಳುವದಲ್ಲ ನೆಲೆಯು ತಿಳಿಯುವದಲ್ಲ ||೩||
ಅಳೆದು ಕೊಡುವುದಲ್ಲ ಕೊಳಗ ಎಣಿಸುವುದಲ್ಲ ||೪||
ತೂಕ ಮಾಡುವದಲ್ಲ ಲೆಕ್ಕ ಇಡುವುದಲ್ಲ ||೫||
ಇಟ್ಟು ಮಾರುವುದಲ್ಲ ಕೊಟ್ಟರ್ಹೋಗುವುದಲ್ಲ ||೬||
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ ||೭||
ಹೇಳಿದೆ ನಾ ನಿಮಗೊಂದು ಸುಲಭವಾಗಿಂದು ||೮||
ಒಮ್ಮನವಾದರೆ ಸುಮ್ಮನೆ ಬಾಹುದು ||೯||
ಸಾಧು ಸಜ್ಜನರಿಗೆ ಸಾಧ್ಯವಾಗದಿದು ||೧೦||
ಸಾರಿ ಚಲ್ಲಿದ ಮಹಿಪತಿ ವಸ್ತುಮಯವಿದು ||೧೧||
***
ಕಾಖಂಡಕಿ ಶ್ರೀ ಮಹಿಪತಿರಾಯರು
ಕೊಂಡಿರ್ಯಾ ನೀವು ಕೊಂಡಿರ್ಯಾ ಮಂಡಲದೊಳು ವಸ್ತು ಕೊಂಡಿರ್ಯಾ ಪ
ಕೊಳಬೇಕಾದರ ನೀವು ತಿಳಿದುಕೊಂಡು ಬನ್ನಿ 1
ತಿಳಿಯದಿದ್ದರೆ ಖೂನ ಕೇಳಿ ಸದ್ಗುರುವಿನ 2
ಬೆಲೆಯು ಹೇಳುವದಲ್ಲ ನೆಲೆಯ ತಿಳಿಯುವದಲ್ಲ 3
ಕೊಳಗ ಎಣಿಸುವುದಲ್ಲ4
ತೂಕ ಮಾಡುವುದಲ್ಲ ಲೆಕ್ಕ ಇಡುವುದಲ್ಲ 5
ಇಟ್ಟು ಮಾರುವದಲ್ಲ ಕೊಟ್ಟರ್ಹೋಗುವುದಲ್ಲ 6
ಪಂಡಿತರಿಗೆ ಪ್ರಾಣ ಕೊಂಡವರಿಗೆ ತ್ರಾಣ 7
ಹೇಳಿದ ನಾ ನಿಮಗೊಂದು ಸುಲಭವಾಗಿಂದು 8
ಒಮ್ಮನವಾದರ ಸುಮ್ಮನೆಬಾಹುದು 9
ಸಾಧುಸಜ್ಜನರಿಗೆ ಸಾಧ್ಯವಾಗುದಿದು 10
ಸಾರಿ ಚೆಲ್ಲೇದ ಮಹಿಪತಿ ವಸ್ತುಮಯಮಿದು11
***