ಗರುಡ ಗಮನ ಬಂದನೋ, ನೋಡಿರೋ ಬೇಗ ||ಪ ||
ಗರುಡ ಗಮನ ಬಂದ ಧರಣಿಯಿಂದೊಪ್ಪುತ
ಕರೆದು ಬಾರೆನ್ನುತ ವರಗಳ ಬೀರುತ ||ಅ ||
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನವ ಪೋಲುವ ವಿಹಂಗಜ ರಥದಲಿ
ಘನ್ನಮಹಿಮ ಬಂದ ಭಿನ್ನ ಮೂರುತಿ ಬಂದ
ಸಣ್ಣ ಕೃಷ್ಣ ಬಂದ ಬೆಣ್ಣೆ ಕಳ್ಳ ಬಂದ ||
ಪಕ್ಷಿ ವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳಗೆ ಜಗವನ್ನಿಟ್ಟವ ತಾ ಬಂದ
ಸೂಕ್ಷ್ಮ ಸ್ಥೂಲದೊಳು ಇಪ್ಪನು ತಾ ಬಂದ
ಸಾಕ್ಷಿ ಭೂತನು ಅವ ಸರ್ವೇಶ್ವರನು ಬಂದ ||
ತಂದೆ ಪುರಂದರವಿಠಲರಾಯ ಬಂದ
ಬಂದು ನಿಂದು ನಲಿದಾಡಿದನು
ಸಿಂಧುಶಯನ ಬಂದ ಅಂದು ಸಾಂದೀಪನ
ನಂದನ ತಂದಿತ್ತಾನಂದಮೂರುತಿ ಬಂದ ||
***
ರಾಗ ಬಿಲಹರಿ. ಅಟ ತಾಳ (raga tala may differ in audio)
pallavi
garuDa gamana bandanO nODirO bEga
anupallavi
garuDa gamana banda dharaNiyindoppuda karedu bArennuta varagaLa biRuta
caraNam 1
enna rakSipa dore illige tA banda cinnava pOluva vihangaja rathadali
ghanna mahima banda bhinna mUruti banda saNNa krSNa banda beNNe kaLLa banda
caraNam 2
pakSi vAhana banda lakSmIpatiyu banda kukSiyoLage jagavanniTTava tA banda
sUkSma sthUladoLu ippanu tA banda sAkSi bhUtanu ava sarvEshvaranu banda
caraNam 3
tande purandara viTTalarAya banda bandu nindu nalidADidanu
sindu shayana banda andu sAndIpana nandana tandittAnanda mUruti banda
***
ಗರುಡ ಗಮನ ಬಂದನೋ ನೋಡಿರೊ ಬೇಗ
ಗರುಡ ಗಮನ ಬಂದನೋ || ||ಪ||
ಗರುಡ ಗಮನ ಬಂದ ಧರಣಿಯಿಂದೊಪ್ಪುತ
ಕರೆದು ಬಾರೆನ್ನುತ ವರಗಳ ಬೀರುತ || || ಅ ಪ|| ||ಗರುಡ||
ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನವ ಪೋಲುವ ವಿಹಂಗಜ ರಥದಲ್ಲಿ
ಘನ್ನಮಹಿಮ ಬಂದ ಭಿನ್ನ ಮೂರುತಿ ಬಂದ
ಸಣ್ಣ ಕೃಷ್ಣ ಬಂದ ಬೆಣ್ಣೆ ಕಳ್ಳ ಬಂದ || ||ಗರುಡ||
ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳಗೆ ಜಗವನಿತ್ತವಾ ತಾ ಬಂದ
ಸೂಕ್ಷ್ಮ ಸ್ಥೂಲದೊಳು ಇಪ್ಪಾನು ತಾ ಬಂದ
ಸಾಕ್ಷಿಭೂತ ಅವ ಸರ್ವೇಶ್ವರ ಬಂದ || ||ಗರುಡ||
ತಂದೆ ಪುರಂದರ ವಿಠಲರಾಯ ಬಂದ
ಬಂದು ನಿಂತು ನಲಿದಾಡಿದನೂ
ಸಿಂಧುಶಯನ ಬಂದ ಅಂದು ಸಂದೀಪನ
ನಂದನ ತಂದಿತ್ತ ಆನಂದ ಮೂರುತಿ ಬಂದ || ||ಗರುಡ||
********