ರಾಗ ಅಂಜನಾವತಿ ತಾಳ ಆದಿ
ಬಾರೋ ಹೃದಯ ಸದನಾ ಮುಖ್ಯ ಪ್ರಾಣ ಪ
ಬಾರೋ ಹೃದಯದೊಳು ವಾರಿಜಾಸನ ಪದಏರುವಾತನೆ ದಿವ್ಯ ಕಾರುಣ್ಯ ಸಾಗರ ಅ.ಪ.
ಹರಿಭಕ್ತರೊಳು ನೀನು ಹಿರಿಯನೆಂಬುವ ವಾರ್ತೆಪರಿಪರಿ ಕೇಳುತ ಶರಣು ಬಂದೆನೊ ನಿನ್ನ1
ಮಂದಗಮನೆ ಕೊಟ್ಟ ಇಂದ್ರಮಾಣಿಕ ಮಾಲೆಕಂಧರದೊಳಗಿಟ್ಟ ಇಂದ್ರಶಯನ ಪ್ರೀಯಾ 2
ಕಾಳಿ ರಮಣ ಧರ್ಮನಾಳೆ ಎನಲು ಧನ-ನೀಲ ಮಾಣಿಕ್ಯ ಭೂಷಲೋಲ ಭೂಸುರಗಿತ್ತೆ 3
ಮಾಧವನಾಜ್ಞದಿ ಮೇದಿನಿಯೊಳು ಬಂದುಬಾದರಾಯಣ ಮತ ಸಾಧನೆ ಮಾಡಿದ 4
ಇಂದಿರೇಶನ ಪಾದ ಮುಂದೆ ಸೇವಿಸಿ ನಿತ್ಯಾನಂದತೀರ್ಥರೇ ನೀವು ಸಂದೇಹವಿಲ್ಲದೆ 5
****