Showing posts with label ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ ಫುಲ್ಲನಾಭ ನೀ purandara vittala ILLIRALAARE ALLIGE POGALAARE PHULLANAABHA NEE. Show all posts
Showing posts with label ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ ಫುಲ್ಲನಾಭ ನೀ purandara vittala ILLIRALAARE ALLIGE POGALAARE PHULLANAABHA NEE. Show all posts

Monday, 13 December 2021

ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ ಫುಲ್ಲನಾಭ ನೀ purandara vittala ILLIRALAARE ALLIGE POGALAARE PHULLANAABHA NEE







ಪುರಂದರದಾಸರು

ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಫುಲ್ಲನಾಭ ನೀನಿದ್ದಲ್ಲಿ ಸೇರಿಸೆನ್ನ ||ಪ||

ಮರಣವನೊಲ್ಲೆ ಜನನವನೊಲ್ಲೆ
ದುರಿತ ಸಂಸಾರ ಕೋಟಲೆಯ ನಾನೊಲ್ಲೆ
ಕರುಣದಿ ಕರುಗಳ ಕಾಯ್ದ ಗೋವಳ ನಿನ್ನ
ಚರಣಕಮಲದ ಸ್ಮರಣೆಯೊಳಿರಿಸೆನ್ನ ||

ಬೆಂದ ಸಂಸಾರೆಂಬೋ ಬೇನೆ ಮಧ್ಯದಲಿ
ನೊಂದೆನೊ ನಾ ಬಹಳ ಕರಕರೆಯಲ್ಲಿ
ನಂದಗೋಪನ ಕಂದ ವೃಂದಾವನಪ್ರಿಯ
ಎಂದೆಂದು ನಿನ್ನ ಸ್ಮರಣೆಯೊಳಿರಿಸೆನ್ನ ||

ಪುತ್ರ ಮಿತ್ರ ಕಳತ್ರ ಬಂಧುಗಳೆಂಬ
ಕತ್ತಲೆಯೊಳು ಸಿಲುಕಿ ಕಡು ನೊಂದೆನಲ್ಲ
ಮುಕ್ತಿದಾಯಕ ಉಡುಪಿಯ ಕೃಷ್ಣರಾಯ
ಭಕ್ತವತ್ಸಲ ಶ್ರೀ ಪುರಂದರವಿಠಲ ||
*********

ರಾಗ ರೇಗುಪ್ತಿ ಅಟತಾಳ (raga, taala may differ in audio)

pallavi

illiralAre allige hOgalAre pullanAbha nIniddalli sErisenna

caraNam 1

maraNavanolle jananavanolle durita samsAra koDaleya nAnolle
karuNadi karugaLa kAida gOvaLa ninna caraNa kamalada smaraNeyoLirisenna

caraNam 2

benda samsAravembo bene madhyadali nondeno nA bahaLa kara kareyalli
nandagOpana kanda vrndAvana priya endendu ninna smaraNeyoLirisenna

caraNam 3

putra mitra kaLatra bandhugaLemba kattaleyoLu siluki kaDu nondenalla
mukti dAyaka uDupiya krSNarAya bhaktavatsala purandara viTTala
***

ಇಲ್ಲಿರಲಾರೆ ಅಲ್ಲಿಗೆ ಪೋಗಲಾರೆ |
ಫುಲ್ಲನಾಭನೆ ನೀನಿದ್ದಲ್ಲಿ ಇರಿಸೆನ್ನ ಪ

ಮರಳಿ ಮರಳಿ ಜನ್ಮ ಮರಣವನೊಲ್ಲೆ |ದುರುತ ಕೋಟಲೆಯ ಸಂಸಾರವನೊಲ್ಲೆ ||ತುರುಕಾದು ಕೊಳಲನೂದುವ ಮುರಮರ್ದನ |ಚರಣಕಮಲಗಳ ಸ್ಮರಣೆಯೊಳಿರಿಸೆನ್ನ 1

ಬಂದು ಸಂಸಾರದ ಬೇನೆಯೊಳಗೆ ಬಿದ್ದು |ನೊಂದೆನು ಕಡುಮೋಹದಿಂದ ನಾ ಬೆಂದು ||ನಂದಗೋಪನ ಕಂದ ವೃಂದಾವನಪ್ರಿಯ |ಎಂದೆಂದು ತವಪಾದ ಸ್ಮರಣೆಯೊಳಿರಿಸೆನ್ನ 2

ಪುತ್ರ-ಪೌತ್ರರು ಬಂಧು-ಮಿತ್ರ ಬಾಂಧವರೆಂದು |ಕತ್ತಲೆಯೊಳು ಕಡುನೊಂದೆನಯ್ಯ ||ಸತ್ಯಮೂರುತಿ ಶ್ರೀ ಉಡುಪಿಯ ಶ್ರೀ ಕೃಷ್ಣ |ಭಕ್ತವತ್ಸಲ ಶ್ರೀಪುರಂದರವಿಠಲ 3
*******