ನೋಡು ನೋಡು ಟೀಕಾರಾಯರ
ಶ್ರೀವ್ಯಾಸತತ್ತ್ವಜ್ಞತೀರ್ಥರ ರಚನೆ (IG Swamigalu)
ರಾಗ ಜಂಜೂಟಿ , ಆದಿತಾಳ
ನೋಡು ನೋಡು ಟೀಕಾಚಾರ್ಯರ
ಮಾಡು ವಂದನೆಗಳ ಬೇಡು ವರಗಳನ್ನು ||pa||
ದುರ್ಮಾಯಿ ಮತಗಳ ಮರ್ಮ ಭೇದಿಸಿ ಸುಧಾ
ನಿರ್ಮಾಣ ಮಾಡಿದ ಆರ್ಯರ ||1||
ಲಲಿತೋಧ್ರ್ವ ಪುಂಡ್ರ ಶ್ರೀ ತುಲಸೀಭೂಷಿತ ಕರ್ನ
ವಿಲಸಿತ ಕಾಪಾಯಧಾರ್ಯರ ||2||
ಯಾವಾಗಲೂ ವಾಸುದೇವವಿಠಲನ್ನ
ಸೇವಿಸುವರ ಭಜಿಸುವರ ||3||
*********