Showing posts with label ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ prahladavarada vittala. Show all posts
Showing posts with label ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ prahladavarada vittala. Show all posts

Monday, 6 September 2021

ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ ankita prahladavarada vittala

 ankita ಪ್ರಹ್ಲಾದವರದ (ವರದಪ್ರಹ್ಲಾದ)ಶ್ರೀಹರಿವಿಠಲ

ರಾಗ: [ಸಾವೇರಿ]  ತಾಳ: [ಮಿಶ್ರನಡೆ/ಮಿಶ್ರಛಾಪು]


ಬಾರೋ ನಮ್ಮ ಮನೆಗೆ ಗುರು ರಾಘವೇಂದ್ರ 


ಬಾರೋ ಸದ್ಗುಣಶೀಲ ಸಾರಭಕುತಿಲೋಲ

ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನಪ್ರಿಯ ಅ.ಪ


ಬಲದ ಕೈಯೊಳು ಪಿಡಿದ ಹೊಳೆವೋ ಸಾಲಿಗ್ರಾಮ

ಚೆಲುವಾದ ಕಾಷಾಯ ಥಳಿಪ ದಂಡವ ಧರಿಸಿ 1

ಬೆಳಗುವ ನಗೆನೋಟ ಕಳೆಪೂರ್ಣಮುಖಮಾಟ

ತುಳಸಿಮಾಲೆಯೋಲ್ಯಾಟ ಭಳಿರೆ ಭಜಕರನೆಂಟ 2

ಎಡಬಲ ಸೇವಕರು ಬಿಡದೆ ಸ್ತುತಿಸುತಿರೆ

ಕಡುಬೇಗದಿಂದಲಿ ಬಂದು ಬಡವರಸಲಹಲು 3

ದೀನರುದ್ಧಾರಕ ಮಾನಿಗಳರಸನೆ

ಜ್ಞಾನದಾಯಕ ನಮ್ಮ ಶ್ರೀನಿವಾಸನದೂತ 4

ಮುಂದೆ ನಡೆಯೆ ಗುಣವೃಂದ ವಾದಿರಾಜ

ಸುಂದರ ಜಯರಾಯ ಧೀರೇಂದ್ರ ಧೃವರ ಸಹಿತ 5

ಮೂಲರಾಮನಗುಣ ಜಾಲಗಳನು ನಿತ್ಯ

ಶೀಲ ಮನದಿ ತುತಿಪ ಬಾಲ ಪ್ರಹ್ಲಾದನೆ 6

ಪ್ರಹ್ಲಾದವರದಶ್ರೀಹರಿವಿಟ್ಟಲನ ಕಥಾ-

ಸಲ್ಲಾಪನೆ ಪಾದಪಲ್ಲವ ತೋರಿಸುತ 7

***

ವಾದಿರಾಜ, ಜಯರಾಯ, ಧೀರೇಂದ್ರ, 

ಧೃವ(ಅಂದರೆ ಶ್ರೀಶ್ರೀಪಾದರಾಜರು)=ಇವರುಗಳು ಪ

್ರಸಿದ್ಧ ಮಾಧ್ವ ಯತಿಗಳು;

***