..
ಇವರಲ್ಲೆ ನೀತಿ ರಾಮದೇವರ ಪ್ರೀತಿ ವಿದ್ಯಾಧಿಕರ ಮೂರ್ತಿ ಸತ್ಯ ಸಂಧರ ಕೀರ್ತಿ ಜಗದಲ್ಲಿ ಉದ್ಧರರ ಪ.
ಮಧ್ವರಾಯರು ಪದ್ಮನಾಭ ನರಹರಿ ತೀರ್ಥಶುದ್ಧ ಮಾಧವ ಅಕ್ಷೋಭ್ಯರ ರನ್ನದಶುದ್ಧ ಮಾಧವ ಅಕ್ಷೋಭ್ಯರ ಚರಣವವಿದ್ಯುಕ್ತದಿಂದ ಬಲಗೊಂಬೆ ರನ್ನದ 1
ಪ್ರಸಿದ್ಧ ಜಯತೀರ್ಥ ವಿದ್ಯಾಧಿವಾದಿ ಕವೀಂದ್ರವಾಗೀಶ ರಾಮಚಂದ್ರ ರನ್ನದ ವಾಗೀಶ ರಾಮಚಂದ್ರ ವಿದ್ಯಾನಿಧಿಗಳ ಪಾದ ಪದ್ಮವ ಮೊದಲೆ ಬಲಗೊಂಬೆ ರನ್ನದ 2
ರಘುನಾಥ ರಘುವರ್ಯ ರಘೋತ್ತಮ ತೀರ್ಥರ ವೇದವ್ಯಾಸ ವಿದ್ಯಾಧೀಶರೆ ರನ್ನದ ವೇದವ್ಯಾಸ ವಿದ್ಯಾಧೀಶರ ಚರಣವ ಜಗದ ಗುರುಗಳನು ಬಲಗೊಂಬೆ3
ಉತ್ತಮ ವೇದನಿಧಿ ಸತ್ಯವೃತ ತೀರ್ಥರ ಸತ್ಯನಿಧಿ ಸತ್ಯನಾಥರ ರನ್ನದ ಸತ್ಯನಾಥರ ಚರಣವ ಭಕ್ತಿಂದ ಮೊದಲ ಬಲಗೊಂಬೆ 4
ಸತ್ಯಾಭಿನವ ತೀರ್ಥ ಸತ್ಯಪೂರ್ಣ ತೀರ್ಥರಸತ್ಯವಿಜಯ ಸತ್ಯಪ್ರಿಯರ ರನ್ನದ ಸತ್ಯಪ್ರಿಯರ ಚರಣವ ಅತ್ಯಂತವಾಗಿ ಬಲಗೊಂಬೆ 5
ಸತ್ಯಬೋಧ ಸತ್ಯಸಂಧ ಸತ್ಯವರಚಿತ್ತಶುದ್ಧಿಯಲೆ ಬಲಗೊಂಬೆಚಿತ್ತಶುದ್ಧಿಯಲೆ ಸಭೆಯೊಳುಸತ್ಯವಾಕ್ಯಗಳ ನುಡಿಸಲು ರನ್ನದ6
ಸತ್ಯವರ್ಯರೆಂಬ ಉತ್ತಮ ಗುರುಗಳ ಹಸ್ತಕಮಲದಲೆ ನಮಿಸುವೆ ರನ್ನದ ಹಸ್ತಕಮಲದಲೆ ನಮಿಸುವೆ ಜಗದೊಳುಮೆರೆವ ಸತ್ಯಧರ್ಮರನು ಬಲಗೊಂಬೆ 7
ಮಧ್ವರಾಯರ ಪಾದ ಪೊಂದಿದ್ದ ಗುರುಗಳು ವಿದ್ಯುಕ್ತದಿಂದ ಬಲಗೊಂಬೆ ರನ್ನದ ವಿದ್ಯುಕ್ತದಿಂದ ಬಲಗೊಂಬೆ ಅತ್ತಿಗೆಯರ ಗೆದ್ದು ದುಂಧುಭಿಯ ಹೊಯಿಸೇವ ರನ್ನದ 8
ಯತಿ ಮುನಿರಾಯರು ಅತಿ ಭಕ್ತರಾಗಿದ್ದಅತಿಪ್ರಿಯರಾದ ಗುರುಗÀಳು ಅತಿ ಪ್ರಿಯರಾದ ರಾಮೇಶನ ಅತಿ ಭಕ್ತರ ಮೊದಲ ಬಲಗೊಂಬೆ ರನ್ನದ 9
****