Showing posts with label ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ prasannavenkata. Show all posts
Showing posts with label ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ prasannavenkata. Show all posts

Saturday, 16 November 2019

ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ankita prasannavenkata

ಪ್ರಸನ್ನವೆಂಕಟದಾಸರು
ವೆಂಕಟೇಶ ಶ್ರೀ ವೆಂಕಟೇಶ ಪಾಲಿಸುಕಿಂಕರನ ವೆಂಕಟೇಶ ಪ.

ಸುವರ್ಣಮುಖರಿಲಿ ಶಿವನುತಪಾದಾಬ್ಜಸುವರ್ಣಗಿರಿ ವೆಂಕಟೇಶನವ್ಯಚಂದನ ಮೃಗನಾಭಿ ಚರ್ಚಿತಗಾತ್ರಅವ್ಯಾಕೃತನೆ ವೆಂಕಟೇಶ 1

ಹಲವಪರಾಧಿ ನಾ ಭೂರಿದಯಾಳು ನೀನೆಲೆಗೆ ನಿಲ್ಲಿಸು ವೆಂಕಟೇಶಬಲು ತಮ ತುಂಬಿದ ಭವದಿ ಕರುಣಶಶಿಬೆಳಗು ಬೆಳಗು ವೆಂಕಟೇಶ 2

ತಂದೆ ತಾಯಿ ನೀನೆಸಖಸಹೋದರ ನೀನೆಹಿಂದೆ ಮುಂದೆ ನೀ ವೆಂಕಟೇಶಹೊಂದಿದ ಬಂಟನ ಕಂದಾಯ ನಡೆಸಯ್ಯಕುಂದನಾಡದೆ ವೆಂಕಟೇಶ 3

ಸಾಕು ನೀ ಸಾಕದಿದ್ದರೆ ಬಿಡು ನಾ ಬಿಡೆಜೋಕೆ ಬಿರುದು ವೆಂಕಟೇಶನೀ ಕೈಯ ಜರಿದರೆಕಾಕುಮಾಡುವರೆನ್ನಪೋಕವೃತ್ತರು ವೆಂಕಟೇಶ4

ನಂಬಿದೆ ನಂಬಿದೆ ನಂಬಿದೆ ನಿನ್ನಪಾದದಿಂಬಿನೊಳಿಡು ವೆಂಕಟೇಶಬಿಂಬ ಮೂರುತಿ ಪ್ರಸನ್ವೆಂಕಟೇಶಪ್ರತಿಬಿಂಬಕ್ಕರುಹು ವೆಂಕಟೇಶ 5
*******