ಈತನೇ ಲೋಕಗುರು ವೇದವಿಖ್ಯಾತ ಪ.
ಭೂತಳದಿ ಶ್ರೀರಾಮದೂತನೆಂಬಾತ ಅ.ಪ.
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನುಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತುಬಂದು ರಾಮರ ಪಾದಕೆರಗಿ ನಿಂದಾತ 1
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನಲಜ್ಜೆಯನೆ ಕೆಡಿಸಿ ಷಡ್ರಥಿüಕರನು ಗೆಲಿದಮೂಜ್ಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದಸಜ್ಜನಪ್ರಿಯ ಭೀಮಸೇನನೆಂಬಾತ2
ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದುಕೂರ್ಮ ಶ್ರೀ ಹಯವದನನ ಪೂರ್ಣ ಸೇವಕನಾದಧೀರ ಮಧ್ವಾಚಾರ್ಯ ಲೋಕದೊಳು ಮೆರೆದ 3
***
ಈತನೆ ಲೋಕಗುರು ವೇದವಿಖ್ಯಾತ || ಪ ||
ಭೂತಳದಿ ಶ್ರೀರಾಮ ದೂತನೆಂಬಾತ || ಅಪ ||
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು
ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ
ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು
ಬಂದು ರಾಮರ ಪಾದಕೆರಗಿ ನಿಂದಾತ || ೧ ||
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ
ಲಜ್ಜೆಯನೆ ಕೆಡಿಸಿ ಶದ್ರಥಿಕರನು ಗೆಲಿದ
ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ
ಸಜ್ಜನ ಪ್ರಿಯ ಭೀಮಸೇನ ನೆಂಬಾತ || ೨ ||
ಮೂರಾರು ಎರಡೊಂದು ಮೂಢಮತಗಳ ಜರಿದು
ಸಾರ ಮಧ್ವ ಶಾಸ್ತ್ರವನು ಸಜ್ಜನರಿಗೆರೆದು
ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ
ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ || ೩ ||
***
Itane lOkaguru vEdaviKyAta || pa ||
BUtaLadi SrIrAma dUtaneMbAta || apa ||
aMdu hanumaMtanAgi aKiLa dikkellavanu
oMdu nimiShadali pOgi udadhi laMGisida
iMdIvarAkShige vaMdisi mudrikeyanittu
baMdu rAmara pAdakeragi niMdAta || 1 ||
arjunage aNNanAgi aMdu duryOdhanana
lajjeyane keDisi Sadrathikaranu gelida
mUjagavu meccalu munna mAgadhana sILida
sajjana priya BImasEna neMbAta || 2 ||
mUrAru eraDoMdu mUDhamatagaLa jaridu
sAra madhva SAstravanu sajjanarigeredu
kUrma SrIhayavadanana pUrNa sEvakanAda
dhIra madhvAcArya lOkadoLu mereda || 3 ||
***
pallavi
Itane lOkaguru vEdavikhyAta
anupallavi
bhUtaLadi shrI rAma dUtanembAta
caraNam 1
andu hanumantanAgi akhiLa dikkellavanu
ondu nimiSadali pOgi udadhi langhisida
indIvarAkSige vandisi mudrikeyanittu
bandu rAmara pAdakeragi nindAta
caraNam 2
arjunage aNNanAgi andu duryOdhanana
lajjeyane keDisi SaDrathikaranu gelida
mUjagavu meccalu munna mAgadhana sILida
sajjanapriya bhImasEnanembAta
caraNam 3
mUrAru eraDondu mUDhamatagaLa jaridu
sAra madhvashAstravanu sajjanarigeredu
kUrma shrI hayavadanana pUrNa sEvakanAda
dhIra madhvAcArya lOkadoLu mereda
***