ಈತನೆ ಲೋಕಗುರು ವೇದವಿಖ್ಯಾತ || ಪ ||
ಭೂತಳದಿ ಶ್ರೀರಾಮ ದೂತನೆಂಬಾತ || ಅಪ ||
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು
ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ
ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು
ಬಂದು ರಾಮರ ಪಾದಕೆರಗಿ ನಿಂದಾತ || ೧ ||
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ
ಲಜ್ಜೆಯನೆ ಕೆಡಿಸಿ ಶದ್ರಥಿಕರನು ಗೆಲಿದ
ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ
ಸಜ್ಜನ ಪ್ರಿಯ ಭೀಮಸೇನ ನೆಂಬಾತ || ೨ ||
ಮೂರಾರು ಎರಡೊಂದು ಮೂಢಮತಗಳ ಜರಿದು
ಸಾರ ಮಧ್ವ ಶಾಸ್ತ್ರವನು ಸಜ್ಜನರಿಗೆರೆದು
ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ
ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ || ೩ ||
***
Pallavi
Ītane lōkaguru vēdavikyāta
Bhūtaḷadi Śrīrāma dūtanembaāta
Charana 1
Andu Hanumantanāgi akhiḷa dikkellavanu
Oṃdu nimiṣadali pōgi udadhi laṅghisida
Iṃdīvarākṣige vaṃdisi mudrikeyanittu
Baṃdu Rāmara pādakeragi niṃdāta
Charana 2
Arjunage aṇṇanāgi aṃdu Duryōdhanana
Lajjeyane keḍisi śadranathikaranu gelida
Mūjagavu meccalu munna Māgadhana sīḷida
Sajjana priya Bhīmasēna nembaāta
Charana 3
Mūrāru eraḍoṃdu mūḍhamatagaḷa jaridu
Sāra Madhva śāstravanu sajjanarigeredu
Kūrma Śrīhayavadanana pūrṇa sēvakanāda
Dhīra Madhvācārya lōkadoḷu mereda
***
Pronunciation Guide
Vowels: "a" (cup), "ā" (father), "i" (pin), "ī" (see), "u" (put), "ū" (boot), "e" (bed), "o" (go).
Consonants: 'ṭ/ḍ' are retroflex (tongue to roof of mouth); 'ṅ' is nasal "ng" as in "song".
Soft Sounds: 'ś' is a soft "sh" sound; 'j' is as in "joy"; 'g' is always hard as in "go".
Aspiration: Ensure clear 'bh', 'dh', 'gh', and 'ph' sounds for the correct phonetic weight.
Rhythm: Recite with a devotional, lingering, and steady pace to capture the divine essence.
***
Summary (Kannada)
ಈ ಕೀರ್ತನೆಯಲ್ಲಿ ವಾದಿರಾಜ ತೀರ್ಥರು ಮುಖ್ಯಪ್ರಾಣನ ಮೂರೂ ಅವತಾರಗಳಾದ ಹನುಮಂತ, ಭೀಮಸೇನ ಮತ್ತು ಮಧ್ವಾಚಾರ್ಯರ ದಿವ್ಯ ಮಹಿಮೆಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ. ಲೋಕಗುರುವಾದ ಮುಖ್ಯಪ್ರಾಣನು ರಾಮನ ಸೇವಕನಾಗಿ, ಪಾಂಡವರ ರಕ್ಷಕನಾಗಿ ಮತ್ತು ಸಕಲ ಶಾಸ್ತ್ರಗಳ ಸಾರವನ್ನು ಬೋಧಿಸುವ ಆಚಾರ್ಯನಾಗಿ ಹೇಗೆ ಲೋಕವನ್ನು ಉದ್ಧರಿಸಿದನು ಎಂಬುದನ್ನು ದಾಸರು ಈ ಕೃತಿಯಲ್ಲಿ ಕೊಂಡಾಡಿದ್ದಾರೆ.
Padyada Artha
ಪಲ್ಲವಿ:
ಈತನೆ ಲೋಕಗುರು ವೇದವಿಖ್ಯಾತ ||
ಭೂತಳದಿ ಶ್ರೀರಾಮ ದೂತನೆಂಬಾತ ||
ಅರ್ಥ: ಈತನೇ ಜಗತ್ತಿಗೆ ಗುರು, ವೇದಗಳಲ್ಲಿ ಪ್ರಸಿದ್ಧನಾದವನು. ಈ ಭೂಮಿಯ ಮೇಲೆ ಶ್ರೀರಾಮನ ದೂತನಾಗಿ (ಹನುಮಂತನಾಗಿ) ಮೆರೆದವನು ಇವನೇ.
ಚರಣ 1:
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನು |
ಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದ |
ಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತು |
ಬಂದು ರಾಮರ ಪಾದಕೆರಗಿ ನಿಂದಾತ || 1 ||
ಅರ್ಥ: ಹಿಂದಿನ ಅವತಾರದಲ್ಲಿ ಹನುಮಂತನಾಗಿ, ಕ್ಷಣಮಾತ್ರದಲ್ಲಿ ಸಕಲ ದಿಕ್ಕುಗಳನ್ನು ದಾಟಿ ಸಮುದ್ರವನ್ನು ಲಂಘಿಸಿದನು. ಸೀತಾದೇವಿಗೆ (ಇಂದೀವರಾಕ್ಷಿ) ನಮಸ್ಕರಿಸಿ ರಾಮನ ಉಂಗುರವನ್ನು ನೀಡಿ, ಬಂದು ರಾಮನ ಪಾದಕ್ಕೆ ನಮಿಸಿ ನಿಂತನು.
ಚರಣ 2:
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನ |
ಲಜ್ಜೆಯನೆ ಕೆಡಿಸಿ ಶದ್ರಥಿಕರನು ಗೆಲಿದ |
ಮೂಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದ |
ಸಜ್ಜನ ಪ್ರಿಯ ಭೀಮಸೇನ ನೆಂಬಾತ || 2 ||
ಅರ್ಥ: ಅರ್ಜುನನಿಗೆ ಅಣ್ಣನಾಗಿ ಬಂದು, ದುರ್ಯೋಧನನ ಅಹಂಕಾರವನ್ನು ಮುರಿದು, ಶತ್ರು ರಥಿಕರನ್ನು ಸೋಲಿಸಿದನು. ಮೂರೂ ಲೋಕಗಳು ಮೆಚ್ಚುವಂತೆ ಜರಾಸಂಧನನ್ನು (ಮಾಗಧ) ಸೀಳಿದ, ಸಜ್ಜನರ ಪ್ರಿಯನಾದ ಭೀಮಸೇನ ಇವನು.
ಚರಣ 3:
ಮೂರಾರು ಎರಡೊಂದು ಮೂಢಮತಗಳ ಜರಿದು |
ಸಾರ ಮಧ್ವ ಶಾಸ್ತ್ರವನು ಸಜ್ಜನರಿಗೆರೆದು |
ಕೂರ್ಮ ಶ್ರೀಹಯವದನನ ಪೂರ್ಣ ಸೇವಕನಾದ |
ಧೀರ ಮಧ್ವಾಚಾರ್ಯ ಲೋಕದೊಳು ಮೆರೆದ || 3 ||
ಅರ್ಥ: ಅನ್ಯಮತಗಳನ್ನು ಖಂಡಿಸಿ, ಸಾರಭೂತವಾದ ಮಧ್ವ ಶಾಸ್ತ್ರವನ್ನು ಸಜ್ಜನರಿಗೆ ಬೋಧಿಸಿದನು. ಶ್ರೀಹಯವದನನ ಪರಮ ಸೇವಕನಾದ ಧೀರ ಮಧ್ವಾಚಾರ್ಯನಾಗಿ ಲೋಕದಲ್ಲಿ ಪ್ರಸಿದ್ಧನಾದನು.
***
Summary (English)
In this composition, Vadiraja Teertharu glorifies the three incarnations of Mukhya Prana: Hanuman, Bhimasena, and Madhvacharya. He describes how the Lord functioned as the messenger of Rama (Hanuman), the valiant protector of the Pandavas (Bhima), and the supreme teacher who established the essence of the Vedic truth (Madhvacharya). He celebrates the Lord’s role as the universal guide and the devoted servant of Lord Hayavadana.
Meaning (English)
Pallavi:
Ītane lōkaguru vēdavikyāta
Bhūtaḷadi Śrīrāma dūtanembaāta
Meaning: He is the universal teacher, renowned in the Vedas. He is the one who manifested on this earth as the messenger of Sri Rama (Hanuman).
Charana 1:
Andu Hanumantanāgi akhiḷa dikkellavanu
Oṃdu nimiṣadali pōgi udadhi laṅghisida
Iṃdīvarākṣige vaṃdisi mudrikeyanittu
Baṃdu Rāmara pādakeragi niṃdāta || 1 ||
Meaning: In his incarnation as Hanuman, he traveled across all directions in a single moment and leaped across the ocean. He bowed to the lotus-eyed Sita, gave her the ring, and returned to bow at the feet of Rama.
Charana 2:
Arjunage aṇṇanāgi aṃdu Duryōdhanana
Lajjeyane keḍisi śadranathikaranu gelida
Mūjagavu meccalu munna Māgadhana sīḷida
Sajjana priya Bhīmasēna nembaāta || 2 ||
Meaning: As the elder brother to Arjuna, he humiliated Duryodhana and defeated the great warriors. He tore apart Jarasandha (Magadha) to the admiration of the three worlds; he is the beloved of the righteous, Bhimasena.
Charana 3:
Mūrāru eraḍoṃdu mūḍhamatagaḷa jaridu
Sāra Madhva śāstravanu sajjanarigeredu
Kūrma Śrīhayavadanana pūrṇa sēvakanāda
Dhīra Madhvācārya lōkadoḷu mereda || 3 ||
Meaning: He refuted false doctrines and bestowed the essence of Madhva Shastra upon the righteous. As the perfect servant of Lord Hayavadana, the brave Madhvacharya shone in this world.
***
ಈತನೇ ಲೋಕಗುರು ವೇದವಿಖ್ಯಾತ ಪ.
ಭೂತಳದಿ ಶ್ರೀರಾಮದೂತನೆಂಬಾತ ಅ.ಪ.
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನುಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತುಬಂದು ರಾಮರ ಪಾದಕೆರಗಿ ನಿಂದಾತ 1
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನಲಜ್ಜೆಯನೆ ಕೆಡಿಸಿ ಷಡ್ರಥಿüಕರನು ಗೆಲಿದಮೂಜ್ಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದಸಜ್ಜನಪ್ರಿಯ ಭೀಮಸೇನನೆಂಬಾತ2
ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದುಕೂರ್ಮ ಶ್ರೀ ಹಯವದನನ ಪೂರ್ಣ ಸೇವಕನಾದಧೀರ ಮಧ್ವಾಚಾರ್ಯ ಲೋಕದೊಳು ಮೆರೆದ 3
***
Itane lOkaguru vEdaviKyAta || pa ||
BUtaLadi SrIrAma dUtaneMbAta || apa ||
aMdu hanumaMtanAgi aKiLa dikkellavanu
oMdu nimiShadali pOgi udadhi laMGisida
iMdIvarAkShige vaMdisi mudrikeyanittu
baMdu rAmara pAdakeragi niMdAta || 1 ||
arjunage aNNanAgi aMdu duryOdhanana
lajjeyane keDisi Sadrathikaranu gelida
mUjagavu meccalu munna mAgadhana sILida
sajjana priya BImasEna neMbAta || 2 ||
mUrAru eraDoMdu mUDhamatagaLa jaridu
sAra madhva SAstravanu sajjanarigeredu
kUrma SrIhayavadanana pUrNa sEvakanAda
dhIra madhvAcArya lOkadoLu mereda || 3 ||
***
pallavi
Itane lOkaguru vEdavikhyAta
anupallavi
bhUtaLadi shrI rAma dUtanembAta
caraNam 1
andu hanumantanAgi akhiLa dikkellavanu
ondu nimiSadali pOgi udadhi langhisida
indIvarAkSige vandisi mudrikeyanittu
bandu rAmara pAdakeragi nindAta
caraNam 2
arjunage aNNanAgi andu duryOdhanana
lajjeyane keDisi SaDrathikaranu gelida
mUjagavu meccalu munna mAgadhana sILida
sajjanapriya bhImasEnanembAta
caraNam 3
mUrAru eraDondu mUDhamatagaLa jaridu
sAra madhvashAstravanu sajjanarigeredu
kUrma shrI hayavadanana pUrNa sEvakanAda
dhIra madhvAcArya lOkadoLu mereda
***
No comments:
Post a Comment