ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು || ಪ ||
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ || ಅಪ||
ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷ
ನೊಂದೆನಯ್ಯ ಅಂದಂದು ಮಾಡಿದ ಅಘದಿ
ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು
ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ || ೧ ||
ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು
ವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆ
ಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆ
ಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ || ೨ ||
ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ
ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ
ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ
ವಾಸ ನಿನ್ನ ಪೂಜಿಸದೆ ಮೋಸ ಹೋದೆನಯ್ಯ ನಾನು || ೩ ||
ಸ್ನಾನ ಮೌನಂಗಳನು ಮಾಡುವೆ ಸಕಲ ಜನರ ಮುಂದೆ
ಮಾನವರಿಲ್ಲದಾಗಲೇ ಮೌನವಿಲ್ಲ ಮಂತ್ರವಿಲ್ಲ
ಜ್ಞಾನವ ಪೇಳುವೆ ಮೋಸಕಟ್ಟಲೆಯ ಮಾಡಿಕೊಂಡು
ಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಾ ನಿನ್ನ ಮರೆವೆ || ೪ ||
ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು
ಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದು
ನಿನ್ನ ವಾರ್ತೆಯ ಕರಣ ಕೇಳದು ಅನ್ಯವಾರ್ತೆಗೆ ಹೊತ್ತು ಸಾಲದು
ಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು || ೫ ||
ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗ
ತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವ
ಹಂಬಲಿಸಿ ವಿಷಯಗಳಿಗೆ ಡಂಭನಾಗಿ ಕೆಟ್ಟು ವೃಥಾ
ಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ || ೬ ||
ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣು ಕಾಣಬಾರದು
ಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನ
ತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊ
ಪೊದ್ದಿದವರ ಪೊರೆವ ಕರುಣಾ ಸಿಂಧು ಎನಗೆ ನೀನೆ ಬಂಧು || ೭ ||
***
Pallavi
Īgalo inyāvagalo ī tanuvu pōgadiradu
Bhōgadāseya biḍisayya nāgaśayana naḷinanayana
Charana 1
Eṃbattunālku lakṣa yōnigaḷali baṃdu ambujākṣa
Nondēnayya aṃdandu māḍida aghadi
Kuṃbhīpāka modalāda kutsita narakadi biddu
Uṃba duḥkhava biḍisayya udadhiśayana puṇyakathana
Charana 2
Ōdi maruḷādēnayya ōdana mātrakke sabheyoḷu
Vādisuve vēdaśāstra upanyāsaṅgaḷanu māḍuve
Krōdharahitanāgi avaru koḍalu koṇḍāḍuve
Ādarisadiddaravara baidu baruve khiṇnanāgi
Charana 3
Dēśadēśaṅgaḷige dhanada āsegāgi pōgi pōgi
Byāsarade kaṇḍavara kāḍi bēḍi baḷalide
Kāsina lābhavu kāṇe ghāsiyādēnayya śrīni
Vāsa ninna pūjisade mōsa hōdēnayya nānu
Charana 4
Snāna maunaṅgaḷanu māḍuve sakala janara muṃde
Mānavarilladāgalē maunavilla maṃtravilla
Jñānava pēḷuve mōsak aṭṭaleya māḍikoṃḍu
Dhyānisade hoṭṭeyannu horeve nā ninna mareve
Charana 5
Heṇṇu honnināse biḍadu puṇyakke mana oḍaṃbaḍadu
Ennadeṃbo mamate taggadu dhanyajanake śiravu baggadu
Ninna vārteya karaṇa kēḷadu anyavārtege hottu sāladu
Innu hēsike manake bāradu mundina gatige dāri tōradu
Charana 6
Ambuvara nānariye kuṭuṃbigaḷa salahalōsuga
Tiṃbe hīnara maneyoḷannava naṃbe ninna caraṇava
Haṃbalisi viṣayagaḷige ḍaṃbhanāgi keṭṭu vṛthā
Kuṃbhiṇಿಗೆ bhāravādenu kaṃbukaṃdhara ninna neneyade
Charana 7
Vṛddhanādēnu palgaḷella biddavu kaṇṇu kāṇabāradu
Eddu nillalārēnayya uddhariso Hayavadana
Tiddi manava ninna pādapadmava nenevante māḍo
Poddidavara poreva karuṇā sindhu enage nīne baṃdhu
***
Pronunciation Guide
Vowels: "a" (cup), "ā" (father), "i" (pin), "ī" (see), "u" (put), "ū" (boot), "e" (bed), "o" (go).
Consonants: 'ṭ/ḍ' are retroflex (tongue to roof of mouth); 'ṅ' is nasal "ng" as in "song".
Soft Sounds: 'ś' is a soft "sh" sound; 'j' is as in "joy"; 'g' is always hard as in "go".
Rhythm: Recite with a tone of deep regret, humble confession, and earnest surrender.
Aspiration: Ensure clear 'bh', 'dh', 'gh', 'ph' for the correct phonetic weight.
***
ಸಾರಾಂಶ
ಈ ಕೀರ್ತನೆಯಲ್ಲಿ ವಾದಿರಾಜ ತೀರ್ಥರು ಮಾನವ ಜೀವನದ ಅನಿತ್ಯತೆಯನ್ನು ಮತ್ತು ತಾವು ಈವರೆಗೆ ನಡೆಸಿದ ಲೌಕಿಕ ಜೀವನದ ವ್ಯರ್ಥತೆಯನ್ನು ಕುರಿತು ಪಶ್ಚಾತ್ತಾಪ ಪಡುತ್ತಾರೆ. ದೇಹವು ಯಾವುದೇ ಕ್ಷಣದಲ್ಲಿ ನಾಶವಾಗಬಹುದು ಎಂಬುದನ್ನು ಅರಿತು, ಭೋಗದಾಸೆಗಳನ್ನು ಬಿಟ್ಟು ಭಗವಂತನ ಶರಣಾಗತಿಯೇ ಏಕೈಕ ದಾರಿ ಎಂದು ದಾಸರು ಈ ಕೃತಿಯ ಮೂಲಕ ಸಾರಿದ್ದಾರೆ.
ಪದ್ಯದ ಅರ್ಥ (ಕನ್ನಡ)
ಪಲ್ಲವಿ:
ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು |
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ||
ಅರ್ಥ: ಈ ದೇಹವು ಈಗಲೋ ಅಥವಾ ಮುಂದಿನ ಕ್ಷಣವೋ ನಾಶವಾಗುವುದು ಖಚಿತ. ಓ ಭಗವಂತನೇ, ಈ ಭೋಗದಾಸೆಯನ್ನು ನನ್ನಿಂದ ದೂರಮಾಡು.
ಚರಣ 1:
ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷ
ನೊಂದೆನಯ್ಯ ಅಂದಂದು ಮಾಡಿದ ಅಘದಿ |
ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು
ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ ||
ಅರ್ಥ: 84 ಲಕ್ಷ ಜನ್ಮಗಳಲ್ಲಿ ನಾನಾ ಕಷ್ಟಗಳನ್ನು ಅನುಭವಿಸಿದೆ. ನನ್ನ ಪಾಪಗಳಿಂದಾಗಿ ನರಕಯಾತನೆಗಳನ್ನು ಅನುಭವಿಸಿದೆ. ಓ ಪ್ರಭುವೇ, ಇನ್ನು ಆ ದುಃಖಗಳಿಂದ ನನ್ನನ್ನು ಬಿಡಿಸು.
ಚರಣ 2:
ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು
ವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆ |
ಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆ
ಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ ||
ಅರ್ಥ: ಶಾಸ್ತ್ರಗಳನ್ನು ಓದಿ ಅಹಂಕಾರಗೊಂಡೆ. ಸಭೆಗಳಲ್ಲಿ ವಾದ ಮಾಡಿದೆ, ಭಾಷಣ ಮಾಡಿದೆ. ಜನರು ಹೊಗಳಿದರೆ ಸಂತೋಷ, ತೆಗಳಿದರೆ ಕೋಪಗೊಂಡು ನಿಂದಿಸಿದೆ. ಇದು ನನ್ನ ಮೂರ್ಖತನ.
ಚರಣ 3:
ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ
ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ |
ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ
ವಾಸ ನಿನ್ನ ಪೂಜಿಸದೆ ಮೋಸ ಹೋದೆನಯ್ಯ ನಾನು ||
ಅರ್ಥ: ಹಣಕ್ಕಾಗಿ ದೇಶ ಸುತ್ತಿದೆ, ಜನರ ಬಳಿ ಭಿಕ್ಷೆ ಬೇಡಿದೆ. ಕೊನೆಗೆ ಉಳಿದಿದ್ದು ಬರಿ ನಷ್ಟ. ನಿನ್ನನ್ನು ಪೂಜಿಸದೆ ಮೋಸ ಹೋದೆ.
ಚರಣ 4:
ಸ್ನಾನ ಮೌನಂಗಳನು ಮಾಡುವೆ ಸಕಲ ಜನರ ಮುಂದೆ
ಮಾನವರಿಲ್ಲದಾಗಲೇ ಮೌನವಿಲ್ಲ ಮಂತ್ರವಿಲ್ಲ |
ಜ್ಞಾನವ ಪೇಳುವೆ ಮೋಸಕಟ್ಟಲೆಯ ಮಾಡಿಕೊಂಡು
ಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಾ ನಿನ್ನ ಮರೆವೆ ||
ಅರ್ಥ: ಜನರ ಮುಂದೆ ಮಾತ್ರ ಭಕ್ತಿ ತೋರುವ ನಾಟಕ ಮಾಡಿದೆ. ಏಕಾಂತದಲ್ಲಿ ಭಕ್ತಿಯಿಲ್ಲ, ಮಂತ್ರವಿಲ್ಲ. ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಜ್ಞಾನದ ಪಾಠ ಮಾಡಿದೆ, ನಿನ್ನನ್ನೇ ಮರೆತೆ.
ಚರಣ 5:
ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು
ಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದು |
ನಿನ್ನ ವಾರ್ತೆಯ ಕರಣ ಕೇಳದು ಅನ್ಯವಾರ್ತೆಗೆ ಹೊತ್ತು ಸಾಲದು
ಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು ||
ಅರ್ಥ: ಆಸೆಗಳು ಬಿಡುತ್ತಿಲ್ಲ, ಪುಣ್ಯದ ಕೆಲಸಕ್ಕೆ ಮನಸ್ಸಿಲ್ಲ. ಅಹಂಕಾರ ಕಡಿಮೆಯಾಗುತ್ತಿಲ್ಲ, ನಿನ್ನ ಕಥೆ ಕೇಳುವ ಆಸಕ್ತಿಯಿಲ್ಲ. ಇನ್ನು ಹೇಗೆ ನನ್ನ ಗತಿ?
ಚರಣ 6:
ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗ
ತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವ |
ಹಂಬಲಿಸಿ ವಿಷಯಗಳಿಗೆ ಡಂಭನಾಗಿ ಕೆಟ್ಟು ವೃಥಾ
ಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ ||
ಅರ್ಥ: ಕುಟುಂಬಕ್ಕಾಗಿ ಹೀನರ ಮನೆಯಲ್ಲಿ ಉಣ್ಣುವ ಹೀನ ಸ್ಥಿತಿಗೆ ಬಂದೆ. ವಿಷಯ ಸುಖಕ್ಕೆ ಬಿದ್ದು ಭೂಮಿಗೆ ಭಾರವಾದೆ, ನಿನ್ನ ಸ್ಮರಣೆ ಮಾಡಲಿಲ್ಲ.
ಚರಣ 7:
ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣು ಕಾಣಬಾರದು
ಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನ |
ತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊ
ಪೊದ್ದಿದವರ ಪೊರೆವ ಕರುಣಾ ಸಿಂಧು ಎನಗೆ ನೀನೆ ಬಂಧು ||
ಅರ್ಥ: ವೃದ್ಧಾಪ್ಯ ಬಂದಿದೆ, ಶಕ್ತಿ ಕುಂದಿದೆ. ಓ ಹಯವದನನೇ, ನನ್ನನ್ನು ಉದ್ಧರಿಸು. ನಿನ್ನ ಪಾದವನ್ನೇ ನೆನೆಯುವಂತೆ ನನ್ನ ಮನಸ್ಸನ್ನು ತಿದ್ದಿ, ನನ್ನನ್ನು ಸಲಹು.
***
Summary
In this soul-stirring composition, Vadiraja Teertharu laments his wasted life spent in the pursuit of material wealth, intellectual arrogance, and hypocritical displays of devotion. He realizes the transience of the body and prays to Lord Hayavadana to cleanse his heart of desires, vanity, and ignorance, ultimately surrendering himself to the Lord’s grace.
Meaning Stanza by Stanza (English)
Pallavi:
Īgalo inyāvagalo ī tanuvu pōgadiradu
Bhōgadāseya biḍisayya nāgaśayana naḷinanayana
Meaning: This body is bound to perish, either now or in the next moment. Oh Lord, remove my attachment to worldly pleasures.
Charana 1:
Eṃbattunālku lakṣa yōnigaḷali baṃdu ambujākṣa
Nondēnayya aṃdandu māḍida aghadi
Kuṃbhīpāka modalāda kutsita narakadi biddu
Uṃba duḥkhava biḍisayya udadhiśayana puṇyakathana
Meaning: I have suffered in 84 lakh births due to my sins. I have fallen into terrible hells like Kumbhipaka. Oh Lord, please liberate me from this suffering.
Charana 2:
Ōdi maruḷādēnayya ōdana mātrakke sabheyoḷu
Vādisuve vēdaśāstra upanyāsaṅgaḷanu māḍuve
Krōdharahitanāgi avaru koḍalu koṇḍāḍuve
Ādarisadiddaravara baidu baruve khiṇnanāgi
Meaning: I became arrogant by studying scriptures. I argued in public and gave sermons. I praised those who pleased me and cursed those who didn't, living in ignorance.
Charana 3:
Dēśadēśaṅgaḷige dhanada āsegāgi pōgi pōgi
Byāsarade kaṇḍavara kāḍi bēḍi baḷalide
Kāsina lābhavu kāṇe ghāsiyādēnayya śrīni
Vāsa ninnapūjisade mōsa hōdēnayya nānu
Meaning: I traveled to many lands for money, begging and bothering people. I gained nothing but misery. By not worshipping You, oh Srinivasa, I have been deceived.
Charana 4:
Snāna maunaṅgaḷanu māḍuve sakala janara muṃde
Mānavarilladāgalē maunavilla maṃtravilla
Jñānava pēḷuve mōsak aṭṭaleya māḍikoṃḍu
Dhyānisade hoṭṭeyannu horeve nā ninna mareve
Meaning: I performed ritualistic baths and silences only to show others. In private, I had no devotion. I preached knowledge only to fill my belly, forgetting You.
Charana 5:
Heṇṇu honnināse biḍadu puṇyakke mana oḍaṃbaḍadu
Ennadeṃbo mamate taggadu dhanyajanake śiravu baggadu
Ninna vārteya karaṇa kēḷadu anyavārtege hottu sāladu
Innu hēsike manake bāradu mundina gatige dāri tōradu
Meaning: My lust for wealth and women doesn't fade. My ego doesn't subside. My ears don't wish to hear Your stories, but I have time for useless gossip. I am lost and see no path ahead.
Charana 6:
Ambuvara nānariye kuṭuṃbigaḷa salahalōsuga
Tiṃbe hīnara maneyoḷannava naṃbe ninna caraṇava
Haṃbalisi viṣayagaḷige ḍaṃbhanāgi keṭṭu vṛthā
Kuṃbhiṇige bhāravādenu kaṃbukaṃdhara ninna neneyade
Meaning: To support my family, I ate food provided by the wicked. I became a hypocrite, chasing sensory pleasures. I became a burden to the Earth, failing to remember You.
Charana 7:
Vṛddhanādēnu palgaḷella biddavu kaṇṇu kāṇabāradu
Eddu nillalārēnayya uddhariso Hayavadana
Tiddi manava ninna pādapadmava nenevante māḍo
Poddidavara poreva karuṇā sindhu enage nīne baṃdhu
Meaning: I have grown old, my teeth are gone, and I am blind. I cannot even stand up. Oh Hayavadana, please uplift me. Rectify my mind to dwell on Your lotus feet. You are the ocean of mercy and my only relative.
***
IgalO inyaavaagalO I tanuvu pOgadiradu || pa ||
bhOgadaaseya biDisayya naagashayana naLinanayana || apa||
eMbattunaalku lakSha yOnigaLali baMdu aMbujaakSha
noMdenayya aMdaMdu maaDida aGadi
kuMbhIpaaka modalaada kutsita narakadi biddu
uMba duHKava biDisayya udadhishayana puNyakathana || 1 ||
Odi maruLaadenayya Odana maatrakke sabheyoLu
vaadisuve vEdashaastra upanyaasaMgaLanu maaDuve
krOdharahitanaagi avaru koDalu koMDaaDuve
Adarisadiddaravara baidu baruve Kinnanaagi || 2 ||
dEshadEshaMgaLige dhanada Asegaagi pOgi pOgi
byaasarade kaMDavara kaaDi bEDi baLalide
kaasina laabhavu kaaNe Gaasiyaadenayya shrIni
vaasa ninna pUjisade mOsa hOdenayya naanu || 3 ||
snaana mounaMgaLanu maaDuve sakala janara muMde
maanavarilladaagalE mounavilla maMtravilla
j~jaanava pELuve mOsakaTTaleya maaDikoMDu
dhyaanisade hoTTeyannu horeve naa ninna mareve || 4 ||
heNNu honninaase biDadu puNyakke mana oDaMbaDadu
ennadeMbo mamate taggadu dhanyajanake shiravu baggadu
ninna vaarteya karaNa kELadu anyavaartege hottu saaladu
innu hEsike manake baaradu muMdina gatige daari tOradu || 5 ||
aMbuvara naanariye kuTuMbigaLa salahalOsuga
tiMbe hInara maneyoLannava naMbe ninna caraNava
haMbalisi viShayagaLige DaMbhanaagi keTTu vRuthaa
kuMbhiNige bhaaravaadenu kaMbukaMdhara ninna neneyade || 6 ||
vRuddhanaadenu palgaLella biddavu kaNNu kaaNabaaradu
eddu nillalaarenayya uddhariso hayavadana
tiddi manava ninna paadapadmava nenevaMte maaDo
poddidavara poreva karuNaa siMdhu enage nIne baMdhu || 7 ||
***
ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ.
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ.
ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷನೊಂದೆನಯ್ಯ ಅಂದಂದು ಮಾಡಿದ ಅಘದಿಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದುಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ 1
ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ2
ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ-ವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು3
ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲಜ್ಞಾನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡುಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ4
ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದುಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದುನಿನ್ನ ವಾರ್ತೆಯ ಕರ್ಣ ಕೇಳದು ಅನ್ಯವಾರ್ತೆ[ಗೆ] ಹೊತ್ತುಸಾಲದುಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು 5
ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವÀಹಂಬಲಿಸಿ ವಿಷಯಗಳಿಗೆ ಡಂಭನಾಗು ಕೆಟ್ಟುವೃಥಾಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ 6
ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣುಕಾಣಬಾರದುಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊಪೊದ್ದಿದವರ ಪೊರೆವ ಕರುಣಾಸಿಂಧು ಎನಗೆ ನೀನೆ ಬಂಧು 7
***
No comments:
Post a Comment