ಕಾಖಂಡಕಿ ಶ್ರೀ ಕೃಷ್ಣದಾಸರು
ಇದು ಹೊಂದಿಕೆಯಲ್ಲಾ ಭಕುತಿಗೆ ಪ
ಗುರುವೆಂದಾಡುತ ನೆರೆನರನಂಬಿ | ಪರಗತಿ ಮಾರ್ಗವ ಎಂತು ನೀ ಕಾಂಬಿ 1
ಕಲ್ಲಿನೊಳಗ ಹರಿಭಾವಿಸಿ ನುಡಿವೀ | ಇಲ್ಲಿ ನೋಡೆಂದರ ಸಂಶಯ ಹಿಡಿವೀ 2
ನುಡಿಯಾಪಸಾರ ಸಂಗಡಿಯೊಳು ಬೆರೆದು | ಧೃಡಗೊಳ್ಳಲಿಲ್ಲ ವಿವೇಕದ ಸಂದು 3
ಹಮ್ಮಿಲಿ ಕೇಳದೇ ಜ್ಞಾನದ ಗುಟ್ಟು | ಧರ್ಮ ಜರಿದು ಜನ ಹೋಯಿತು ಕೆಟ್ಟು 4
ತಂದೆ ಮಹಿಪತಿ ಕರುಣಿಸದನಕಾ | ಎಂದಿಗೆ ದೊರೆಯದು ಸ್ವಾತ್ಮದ ಸುಖಾ 5
***