ಆರತಿಯನು ಬೆಳಗಿರೆ
ಶ್ರೀದೇವಿಸಹಿತ ವಿಠ್ಠಲಗೆ ||ಪ||
ಗೆಜ್ಜೆ ನಾದದ ಹೆಜ್ಜೆ ಇಕ್ಕುವ
ಉಡುಪಿ ಬಾಲ ಮುಕುಂದಗೆ
ರಂಗನಾಯಕಿ ರಮಣಗೆ
ಶ್ರೀ ರಂಗನಾಥ ಸ್ವಾಮಿಗೆ ||೧||
ಕಂಬದಿಂದಲಿ ಉದಿಸಿ ಬಂದ
ಕಮಲಪತಿ ನರಸಿಂಹಗೆ
ವಾಮನ ವಟುವಾಗಿ ಬಂದಗೆ
ವೇಂಕಟಾಚಲ ವಾಸಗೆ ||೨||
ರುಕ್ಮಿಣೀಶ ಕೃಷ್ಣಗೆ
ಜಯ ಜಾನಕಿಪತಿ ರಾಮಗೆ
ಜಗವ ಉದರದಿ ಧರಿಸಿಹ
ಜಯರಾಮವಿಠ್ಠಲ ದೇವಗೆ ||೩||
*********
ಶ್ರೀದೇವಿಸಹಿತ ವಿಠ್ಠಲಗೆ ||ಪ||
ಗೆಜ್ಜೆ ನಾದದ ಹೆಜ್ಜೆ ಇಕ್ಕುವ
ಉಡುಪಿ ಬಾಲ ಮುಕುಂದಗೆ
ರಂಗನಾಯಕಿ ರಮಣಗೆ
ಶ್ರೀ ರಂಗನಾಥ ಸ್ವಾಮಿಗೆ ||೧||
ಕಂಬದಿಂದಲಿ ಉದಿಸಿ ಬಂದ
ಕಮಲಪತಿ ನರಸಿಂಹಗೆ
ವಾಮನ ವಟುವಾಗಿ ಬಂದಗೆ
ವೇಂಕಟಾಚಲ ವಾಸಗೆ ||೨||
ರುಕ್ಮಿಣೀಶ ಕೃಷ್ಣಗೆ
ಜಯ ಜಾನಕಿಪತಿ ರಾಮಗೆ
ಜಗವ ಉದರದಿ ಧರಿಸಿಹ
ಜಯರಾಮವಿಠ್ಠಲ ದೇವಗೆ ||೩||
*********