Audio by Vidwan Sumukh Moudgalya
ಶ್ರೀ ಮಧ್ವಪತಿದಾಸರ ಕೃತಿ (CHECK - should be Gururaya s/o Purandara dasaru)
( ಗುರುಪುರಂದರವಿಠಲಾಕಿಂತ )
ರಾಗ : ಸರಸ್ವತಿ ಆದಿತಾಳ
ವಿಜಯೀಂದ್ರ ಮುನೀಂದ್ರರೆಂಬಾಶ್ಚರ್ಯದ
ಗಜೇಂದ್ರ ಬಂದಿದೆ ಸುಜನರು ನೋಡ ಬನ್ನಿ॥ಪ॥
ಕಲುಷವೆಂಬ ಪಂಕವ ನೀಡಾಡಿ ವಿ-
ಮಲ ಹರಿ ಪದ ತೀರ್ಥದ ಜಲಪಾನ ಮಾಡಿ
ಸಲೆ ಮಧ್ವಮತಾಂಬುಧಿಯೊಳು
ನಲಿ ನಲಿದು ಕುಣಿದಾಡುತಲಿ॥೧॥
ರಮೇಶನ ಧ್ಯಾನವೆಂಬ ಮದವೇರಿ
ಮಮತೆಯೆಂಬ ಕದಳಿ ಕಿತ್ತೀಡಾಡಿ
ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ
ಕುಮತಗಳೆಂಬ ತರುಗಳ ಮುರಿಯುತಲಿ॥೨॥
ಗುರು ಸುರೇಂದ್ರತೀರ್ಥರೆಂಬ
ವರ ಮಾವಟಿಗನ ಆಜ್ಞೆಯೊಳಿದ್ದು
ಗುರುಪುರಂದರವಿಠಲ ಭಕ್ತಿಯೆಂಬ
ಸರಪಣಿಯೊಳು ನಲಿ ನಲಿದಾಡುತಲಿ॥೩॥
*****
ರಾಗ : ಪೂರ್ವೀ ತಾಳ : ಆದಿ
ವಿಜಯೀ೦ದ್ರ ಮುನೀಂದ್ರ-
ರೆಂಬಾಶ್ಚರ್ಯದ ।
ಗಜೇಂದ್ರ ಬಂದಿದೆ ಸುಜನರು -
ನೋಡ ಬನ್ನಿ ।। ಪಲ್ಲವಿ ।।
ಕಲುಷವೆಂಬ ಪಂಕವ -
ನೀಡಾಡಿ । ವಿ ।
ಮಲ ಹರಿ ಪದ ತೀರ್ಥದ -
ಜಲಪಾನ ಮಾಡಿ ।
ಸಲೆ ಮಧ್ವಮತಾಂಬುಧಿಯೊಳು ।
ನಲಿ ನಲಿದು -
ಕುಣಿದಾಡುತಲಿ ।। ಚರಣ ।।
ರಮೇಶನ ಧ್ಯಾನವೆಂಬ ಮದವೇರಿ ।
ಮಮತೆಯೆಂಬ -
ಕದಳಿ ಕಿತ್ತೀಡಾಡಿ ।
ವಿಮಲ ಶ್ರೀಹರಿ -
ಪದ ರಜ ಶಿರದಿ ಧರಿಸಿ ।
ಕುಮತಗಳೆಂಬ -
ತರುಗಳ ಮುರಿಯುತಲಿ ।। ಚರಣ ।।
ಗುರು ಸುರೇಂದ್ರತೀರ್ಥರೆಂಬ ।
ವರ ಮಾವಟಿಗನ -
ಆಜ್ಞೆಯೊಳಿದ್ದು ।
ಗುರು ಪುರಂದರ-
ವಿಠಲ ಭಕ್ತಿಯೆಂಬ ।
ಸರಪಣಿಯೊಳು ನಲಿ -
ನಲಿದಾಡುತಲಿ ।। ಚರಣ ।।
***
ಶ್ರೀ ಕಂಬಾಲೂರು ರಾಮಚಂದ್ರತೀರ್ಥರು ಶ್ರೀ ವಿಜಯೀಂದ್ರತೀರ್ಥರನ್ನು ಸ್ತುತಿಸಿರುವ ಶ್ಲೋಕ
ಪದವಾಕ್ಯ ಪ್ರಮಾಣಜ್ಞಾನ ಸೌಶೀಲ್ಯಾದ್ಯುಪಸೇವಿತಂ।
ವಿಜಯೀಂದ್ರಯತಿದ್ವಾಖ್ಯಾನ್ ಸೇವೇ ವಿದ್ಯಾಗುರೂನ್ ಮಮ॥
***