Showing posts with label ಕಂಡೆ ಕಂಡೇ ನಮ್ಮ ಗೋಪಾಲನ ದುಂಡು indiresha NANDE KANDE NAMMA GOPALANA DUNDU. Show all posts
Showing posts with label ಕಂಡೆ ಕಂಡೇ ನಮ್ಮ ಗೋಪಾಲನ ದುಂಡು indiresha NANDE KANDE NAMMA GOPALANA DUNDU. Show all posts

Saturday, 20 February 2021

ಕಂಡೆ ಕಂಡೇ ನಮ್ಮ ಗೋಪಾಲನ ದುಂಡು ankita indiresha NANDE KANDE NAMMA GOPALANA DUNDU



ಕಂಡೆ ಕಂಡೇ ನಮ್ಮ ಗೋಪಾಲನ ದುಂಡು ankita indiresha

ಶ್ರೀ ತಿರುಪತಿ ಪಾಂಡುರಂಗಿ ಹುಚ್ಚಾಚಾರ್ಯರ ಕೃತಿ 


ಕಂಡೆ ಕಂಡೆನಮ್ಮಾ ಗೋಪಾಲನ ದುಂಡು ಕರದಿ 
ವೇಣು ಚಂಡು ಧರಿಸಿದಂಥ ಪುಂಡರೀಕಾಕ್ಷನ..

ಒಂಭತುರ ತುನಾವ ಲಂಬಿತಾಸನೆ ಹೇಮ
ಬೊಂಬೆಯಂದದಿ ಗೋಪಿ ಡಿಂಭನು ಕೂತಿಹ..

ಅಂಬೆಗಾಲನು ಹಚ್ಚಿ ಕುಂಭಿಣಿಯೊಳು ವಿಧು
ಬಿಂಬದಂದದಿ ಕೂತ ಅಂಬುಜ ವದನನ...

ಮೃಷ್ಟ ಹವಳದಂತೆ ಪುಟ್ಟಿ ತುಟಿಯ ಮೇಲೆ
ಇಟ್ಟು ಕೊಳಲನೂದೊ ಕೃಷ್ಣನೆಂಬುವ ಕೂಸ...

ಹರಳು ಕೆತ್ತಿದ ವೇಣು ಶೆರಗಿನೊಳಗೆ ಮುಖ
ಶಿರಿಯ ನೋಡುತ ಭಾಳು ಹರುಷ ಪಡುವ ಕೂಸ...

ಎನ್ನ ಚಿತ್ತದಿ ಕಟ್ಟಿತು ಇನ್ನಿಂಥಾ ರೂಪವಿ-
ದನ್ನ ತ್ಯಜಿಸಿ ಮನವನ್ಯತ್ರ ಪೋಗದು...

ಇಂಥಾ ಬಾಲನ ವಿಶ್ವ ಪ್ರಾಂದೊಳಗೆ ಕಾಣೆ
ಕಂತುಪಿತನ ಕೃಪೆ ಎಂತು ನಾ ಪೇಳಲಿ...

ಇಂದಿರೇಶನು ಭೂಷಾ ವೃಂದದಿಂದ್ಹೊಳಿಯುವ
ಸುಂದರ ರೂಪವಾನಂದಾದಿ ನೋಡಿದೆ..
********

ಅಂಡಾಂಡದಲ್ಲಿ ಹಾಗೂ ಪಿಂಡಾಂಡದಲ್ಲಿ ಪರಮಾತ್ಮನ ಅದ್ಭುತ ವ್ಯಾಪಾರವನ್ನು ವರ್ಣಿಸುವ ಪ್ರಮೇಯಗಳಿಂದ ಕೂಡಿದ ಕೃತಿ 

KANDE KANDE NAMMA GOPALANA DUNDU
*******