ಕೇಶವ 24 ನಾಮಗಳು
ಕೇಶವನೆಂದರೆ ಕಷ್ಟಗಳು ಪರಿಹಾರ
ನಾರಾಯಣನೆಂದರೆ ನರಕದ ಭಯವಿಲ್ಲ
ಮಾಧವನೆಂದರೆ ಮಮತೆಯಲಿ ಸಲಹುವಾ
ಗೋವಿಂದನೆಂದರೆ ಗೋಳು ಬಿಡಿಸಿ ಕಾಯುವಾ
ವಿಷ್ಣುವಿನ ನೆನೆದರೆ ವೈಕುಂಠ ತೋರುವ
ಮಧುಸೂಧನನ ನೆನೆದರೆ ಮನೋಭೀಷ್ಠ ಸಿದ್ಧೀ
ತ್ರಿವಿಕ್ರಮನ ನೆನೆದರೆ ತೀರುವುವು ಪಾಪಗಳು
ವನನ ನೆನದರೆ ನಮ್ಮವನಾಗಿ ಕಾಯುವ
ಶ್ರೀಧರನ ನೆನೆದರೆ ಶಿರಿದೇವಿ ಒಲಿಯುವಳು
ಹೃಷಿಕೇಶನೆಂದರೆ ಹೃದಯ ಕಲ್ಮಶ ನಾಶ
ಪದುಮನಾಭನ ನೆನೆದರೆ ಪಾಲಿಸುವನೆಲ್ಲರನು
ದಾಮೋದರನ ನೆನೆದರೆ ದಾರಿದ್ರ್ಯ ನಾಶ
ಸಂಕರ್ಷಣನ ನೆನೆದರೆ ಸಂತಾನ ವೃದ್ಧಿ
ವಾಸುದೇವನ ನೆನೆದರೆ ವರಗಳ ಕೊಡುವ
ಪ್ರದ್ಯುಮ್ನ ನ ನೆನೆದರೆ ಸತತ ಪ್ರಕಾಶ ಭೂತಾಯಿ ಮೆಚ್ಚುವಳು
ಅನಿರುದ್ಧನ ನೆನೆದರೆ ಅಭಯ ಕೊಡುವ
ಪುರುಷೋತ್ತಮ ನೆಂದರೆ ಪುಣ್ಯ ಸಾಫಲ್ಯ
ಅದೋಕ್ಷಜನ ನೆನೆದರೆ ಆದರದಿ ಕಾಯುವಾ
ನರಸಿಂಹನ ನೆನೆದರೆ ಭೀತಿ ಪರಿಹಾರ
ಅಚ್ಯುತನ ನೆನೆದರೆ ತುಚ್ಛಗಳು ನಾಶ
ಜನಾರ್ದನ ನೆಂದರೆ ಜಗವೆಲ್ಲ ವಶವು
ಉಪೇಂದ್ರನ ನೆನೆದರೆ ಆಪತ್ತು ಪರಿಹಾರ
ಹರಿನಾಮ ನೆನೆದರೆ ಅತಿಶಯದಿ ಕಾಯುವ
ಶ್ರೀಕೃಷ್ಣ ನ ನೆನೆದರೆ ಕೃಪೆಯಿಂದ ಸಲಹುವಾ
ಶ್ರೀಲಕ್ಷ್ಮೀವೇಂಕಟೇಶಪ್ರಿಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು
***