Showing posts with label ಬಾರೈ ಬಾರೈ ಭಾರತಿ ಮನೋಹರ shyamasundara. Show all posts
Showing posts with label ಬಾರೈ ಬಾರೈ ಭಾರತಿ ಮನೋಹರ shyamasundara. Show all posts

Friday, 27 December 2019

ಬಾರೈ ಬಾರೈ ಭಾರತಿ ಮನೋಹರ ankita shyamasundara

ಶ್ರೀ ಶ್ಯಾಮ ಸುಂದರ ವಿಠಲರ ಕೃತಿ.
ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ || ಪಲ್ಲವಿ ||

ಪವನದೇವ ಬಾರೊ
ಪವಿಸಮಗಾತ್ರ ಬಾರೊ
ರವಿಜನ ಭವಭಯಹರ
ಪಾವನ ಮೂರುತಿ || ೧ ||

ಮಧ್ವಮುನಿಯೆ ಬಾರೊ
ಉದ್ಧರಿಸಲು ಬಾರೊ
ಶುದ್ಧ ಮುಕುತಿದಾತ
ದದ್ಧಲಪುರವಾಸ || ೨ ||

ಗಂಧವಾಹನ ಬಾರೊ
ಸಿಂಧುಬಂಧನ ಬಾರೊ
ಮಂಧರೋದ್ಧರ ಶಾಮ

ಸುಂದರಪ್ರಿಯ ಸುತ || ೩ ||
********
ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ   ಪ

ಪವನದೇವ ಬಾರೋ ಪವಿಸಮಗಾತ್ರ ಬಾರೋ
ರವಿಜನ ಭಯ ಹರ | ಪಾವನ್ನ ಮೂರುತಿ  1


ಮಧ್ವಮುನಿಯೆ ಬಾರೋ | ಉದ್ಧರಿಸಲು ಬಾರೋ |
ಶುದ್ಧ ಮುಕುತಿದಾತ ಗದ್ದಲಪುರವಾಸ 2

ಗಂಧವಾಹನ ಬಾರೋ | ಸಿಂಧು ಬಂಧನ ಬಾರೋ |
ಮಂದರೋದ್ಧಾರ ಶಾಮಸುಂದರ ಪ್ರಿಯಸಖ 3
*********