ಪುರಂದರದಾಸರು
ಕೊಬ್ಬಿನಲಿರಬೇಡವೊ ಏ ನಮ್ಮ ನನುಜಾಕೊಬ್ಬಿನಲಿರಬೇಡವೊ ಪ.
ಸಿರಿಬಂದ ಕಾಲಕೆ ಸಿರಿಮದವೆಂಬರುಬಿರಿದು ಬಿರಿದು ಮೇಲಕೆ ಮಾಳ್ಪರುಸಿರಿಹೋದ ಮರುರಿನ ಬಡತನ ಬಂದರೆಹುರುಕು - ಕಜ್ಜಿಯ ತುರಿಸಿ ತಿರುಗುವರಯ್ಯಾ 1
ಒಡವೆ ವಸ್ತುವನಿಟ್ಟುಬಡಿವಾರ ಮಾಳ್ಪರುನಡೆಯಲಾರನೆಂದು ಬಳುಕುವರುಸಿಡಿಲು ಎರಗಿದಂತೆ ಬಡತನ ಬಂದರೆಕೊಡವ ಹೊತ್ತನಾರ ತರುವರಯ್ಯ 2
ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರುಶಾಪಿಸಿಕೊಂಡರು ಬಡವರ ಕೈಲಿಶ್ರೀಪತಿ ಪುರಂದರವಿಠಲರು ಮುನಿದರೆಭೊಪಾರದೊಳಗೆಲ್ಲ ತಿರಿದು ತಿಂಬರಯ್ಯ 3
*******