ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ಗುರು ಮೂರ್ತಿಯ ನೋಡಿ ನೋಡಿ | ಭಕುತಿಲಿ ನಮನವ ಮಾಡಿ ಮಾಡಿ | ಬೇಗನೆ ವರಗಳ ಬೇಡಿ ಬೇಡಿ ಪ
ಅನುದಿನ ತಪವನು | ಘನತರ ಮಾಡಿದ ಜನರುದ್ದೇಶದ ವನಿಯೊಳಗುದಿಸಿದ ನೋಡಿ | ನೋಡಿ 1
ನಡೆ ನುಡಿ ಗಡಣರಿಯದೆ ಜಡ ಮೂಢರು | ದೃಢದಲಿ ಒಡಲ್ಹುಗೆ ಒಡನುದ್ಧರಿಸುವ | ಅಡಿಗಡಿಗೊಲಿವುತ ನೋಡಿ ನೋಡಿ 2
ನಗೆ ಮೊಗ ಮಹಿಪತಿ ಸುತ ಪ್ರಭು ಬಗೆ ಬಗೆ | ನಿಗಮಾರ್ಥಗರದು ಭಕುತರ ಸುಗಮದಿ | ತಗಬಗಿ ನಲಿಸುವ ನೋಡಿ ನೋಡಿ3
***