Wednesday 1 September 2021

ಶ್ರೀಗುರು ಮೂರ್ತಿಯ ನೋಡಿ ನೋಡಿ ಭಕುತಿಲಿ ನಮನವ ಮಾಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶ್ರೀ ಗುರು ಮೂರ್ತಿಯ ನೋಡಿ ನೋಡಿ | ಭಕುತಿಲಿ ನಮನವ ಮಾಡಿ ಮಾಡಿ | ಬೇಗನೆ ವರಗಳ ಬೇಡಿ ಬೇಡಿ ಪ 


ಅನುದಿನ ತಪವನು | ಘನತರ ಮಾಡಿದ ಜನರುದ್ದೇಶದ ವನಿಯೊಳಗುದಿಸಿದ ನೋಡಿ | ನೋಡಿ 1 

ನಡೆ ನುಡಿ ಗಡಣರಿಯದೆ ಜಡ ಮೂಢರು | ದೃಢದಲಿ ಒಡಲ್ಹುಗೆ ಒಡನುದ್ಧರಿಸುವ | ಅಡಿಗಡಿಗೊಲಿವುತ ನೋಡಿ ನೋಡಿ 2 

ನಗೆ ಮೊಗ ಮಹಿಪತಿ ಸುತ ಪ್ರಭು ಬಗೆ ಬಗೆ | ನಿಗಮಾರ್ಥಗರದು ಭಕುತರ ಸುಗಮದಿ | ತಗಬಗಿ ನಲಿಸುವ ನೋಡಿ ನೋಡಿ3

***


No comments:

Post a Comment