ರಾಗ : ಪಹಡಿ ತಾಳ : ಆದಿ
ಏನಿದು ಬಯಲ ಪಾಶ ನೋಡಿದರಿಲ್ಲ ।
ಏನು ಹುರುಡುಗಾಣೆನೋ ।
ನಾನಾ ಜನ್ಮದಿ ಬಂದು ಹೊಂದಲಾರೆನೋ ನಿನ್ನ ।
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ।। ಪಲ್ಲವಿ ।।
ನೀರಬೊಬ್ಬಳಿಯಂದದಿ ದೇಹವ ನೆಚ್ಚಿ ।
ದೂರು ಹೊತ್ತೆನು ಹರಿಯೇ ।
ಯಾರು ಎನಗೆ । ಸರಿಯಿಲ್ಲನೆಂಬಹಂ ।।
ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೋ ।
ಹರಿ ನಿಮ್ಮ ನಾಮವ ನೆನಿಯದ ।
ಎಂದೆಂದಿಗೆನಗಿತ್ತು ಸದ್ಗತಿ ತೋರೋ ।। ಆ. ಪ ।।
ಬಡವರಾಧಾರಿ ಕೇಳೋ ಸಂಸಾರದ ।
ಮಾಡುವಿನೊಳಗೆ ಧುಮುಕಿ ।
ಕಡೆಹಾಯಿಸೋ ಕೈ ಪಿಡಿದು ಕೃಪೆಯೊಳೆನ್ನ ।
ದಡವ ಸೇರಿಸೋ ಜಗದೊಡೆಯ ಶ್ರೀ ರಂಗಯ್ಯ ।। ಚರಣ ।।
ಸುತ್ತೆಲ್ಲ ಬಂಧು ಬಳಗ ನವ ಮಾಸದಿ ।
ಹೊತ್ತು ಪಡೆದ ಜನನಿ ।
ಪುತ್ರ ಸಹೋದರರ ಘಳಿಗ್ಯಗಲಲಾರದೆ ।
ಮತ್ತೆ ಯಮನವರೊಯ್ವಾಗ ಯಾರು ಸಂಗಡಯಿಲ್ಲ ।। ಚರಣ ।।
ಆಸೆಯೆಂಬುದು ಬಿಡದು ಈ ಭುವನದೊಳ್ ।
ಲೇಸುಗಾಣೆನು ಹರಿಯೇ ।
ಭಾಷೆಯ ಕೊಡು ಮುಂದೆ ಜನುಮ ಬಾರದ ಹಾಗೆ ।
ಈಶ ಸನ್ನುತ ಹೆಳವನಕಟ್ಟೆ ರಂಗಯ್ಯ ।। ಚರಣ ।।
****
ಏನಿದು ಬಯಲ ಪಾಶ ನೋಡಿದರಿಲ್ಲಿ
ಏನು ಹುರುಡುಗಾಣೆನೊ
ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ
ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ.
ನೀರಬೊಬ್ಬುಳಿಯಂದದ ದೇಹವ ನೆಚ್ಚಿ
ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ-
ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ
ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತು
ಸದ್ಗತಿ ತೋರೊ 1
ಬಡವರಾಧಾರಿ ಕೇಳೊ ಸಂಸಾರದ
ಮಡುವಿನೊಳಗೆ ಧುಮುಕಿ
ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ
ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2
ಸುತ್ತೆಲ್ಲ ಬಂಧು ಬಳಗ ನವಮಾಸದಿ
ಹೊತ್ತು ಪಡೆದ ಜನನಿ
ಪುತ್ರ ಸಹೋದರರ ಘಳಿಗ್ಯಗಲಲಾರದೆ
ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3
ಆಸೆಯೆಂಬುದು ಬಿಡದು ಈ ಭುವನದೊಳ್
ಲೇಸುಗಾಣೆನು ಹರಿಯೆ
ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ
ಈಶಸನ್ನುತ ಹೆಳವನಕಟ್ಟೆರಂಗಯ್ಯ 4
***