Showing posts with label ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ prasannashreenivasa. Show all posts
Showing posts with label ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ prasannashreenivasa. Show all posts

Thursday, 5 August 2021

ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ದಕ್ಷಿಣಾ ಮೂರ್ತಿ ಸ್ತೋತ್ರ


ಗುರುವರ ದಕ್ಷಿಣಾ ಮೂರ್ತಿಗೆ ಎರಗುವೆ

ಪುರಂದರ ಮುಖ ಸುರ ವೃಂದ ವಂದಿತರು

ಪರಮಾತ್ಮನು ಶ್ರೀ ರಾಘವ ಸಿಂಹನ

ಪರಮ ಭಕ್ತಾಗ್ರಣಿ ಶರಣರ ಸುರತರು ಪ


ಮೌತಿಕಾಕ್ಷಮಾಲ ಅಮೃತ ಕಲಶ ಅಭಯ

ವಿದ್ಯಾಮುದ್ರಾ ದರ್ಶಕ ಕೈ ಪದ್ಮಗಳ್

ಸುಂದರ ತರ ಶುದ್ಧ ಸ್ಫಟಿಕಾಮಲವರ್ಣ

ಇಂಥ ದಕ್ಷಿಣ ಮೂರ್ತಿಗೆ ಆನಮಿಸುವೆ 1


ಉರಗ ಭೂಷಣ ದಿವ್ಯ ಹೊಳೆವ ಆಭರಣಗಳ್

ಚಂದ್ರ ಚೂಡ ತ್ರಿನೇತ್ರ ಕೃಪಾಕರ

ದಕ್ಷ ಪ್ರಜೇಶ್ವರಾ ದ್ಯಮರರಿಂದೀಡ್ಯ ಈ

ದಕ್ಷಿಣ ಮೂರ್ತಿಯ ಸ್ಮರಿಸೆ ಸಂತೈಪರು 2


ಶ್ರೀಪತಿ ಜ್ಞಾನ ಪ್ರದರ್ಶಸಿ ತೇಜಸ್ ಐಶ್ವರ್ಯ ಈವೋರು

ಅಪಮೃತ್ಯು ವಿಷರೋಗ ಪರಿಹರಿಸುವರು

ಅಬ್ಜಜ ಪಿತ ಶ್ರೀ ಪ್ರಸನ್ನ ಶ್ರೀನಿವಾಸ

ಹೃತ್ಪದ್ಮದಿ ಕಾಂಬ ಮೇಧಾಕೊಡುವರು |

ಗುರುವರ ದಕ್ಷಣಾ ಮೂರ್ತಿಗೆ ಎರಗುವೆ 3

***