Showing posts with label ವೆಂಕಟೇಶ ಜಗದೀಶ ವೆಂಕಟೇಶ ವೆಂಕಟೇಶ ಜಗದೀಶ vijaya vittala. Show all posts
Showing posts with label ವೆಂಕಟೇಶ ಜಗದೀಶ ವೆಂಕಟೇಶ ವೆಂಕಟೇಶ ಜಗದೀಶ vijaya vittala. Show all posts

Thursday, 17 October 2019

ವೆಂಕಟೇಶ ಜಗದೀಶ ವೆಂಕಟೇಶ ವೆಂಕಟೇಶ ಜಗದೀಶ ankita vijaya vittala

ವಿಜಯದಾಸ
ವೆಂಕಟೇಶ ಜಗದೀಶ | ವೆಂಕಟೇಶ ||
ವೆಂಕಟೇಶ ಜಗದೀಶ ಸದರುಶನ |
ಶಂಖಪಾಣಿ ಅಕಳಂಕ ಚರಿತಾ ಪ

ನಭಾಸ್ಥಾನನರಸಿಜನಾಭ ಭಜಕರ ಸು |
ಲಭಾ ವಸುಧಾ ಶ್ರೀ ದುರ್ಗಾವ |
ಭೂಷಣನ ಪಾಲಿಸಿದ ಪಾವನಕಾಯ |
ದಾಸರುಗಳ ಕಾಹುವ ಶೇಷಭೂಷಾ 1

ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ |
ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ |
ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ | ಪೆತ್ತೆ ಮಂದರಗಿರಿ |
ವಿತ್ತ ಸಂಪತ್ತು ಇತ್ತಾ 2

ಅಜಿತ ನಾರಾಯಣಾ ವಿಷ್ವಕ್ಸೇನ | ಗಜವರದ ಹರಿವಿದ್ಭಾನು |
ಸುಜನಪಾಲ ಪಂಕಜದಳ ಲೋಚನ |
ತ್ರಿಜಗದೈವವೆ ದನುಜಕುಲ ಮದರ್Àನ |
ಅಜಕಾನನ ವಾಸ ವಿಜಯವಿಠ್ಠಲ ರವಿತೇಜ ವಿದ್ವದ್ ರಾಜಾ 3
**********