Showing posts with label ಅಂಬೋನಿಧಿ ಹೃದಯಂಬರಯ ವಾಸಿನಿ ಅಂಬಾ ಬಾ ಬಾ prasannashreenivasa AMBONIDHI HRUDAYAMBARA VAASINI AMBAA BAA BAA. Show all posts
Showing posts with label ಅಂಬೋನಿಧಿ ಹೃದಯಂಬರಯ ವಾಸಿನಿ ಅಂಬಾ ಬಾ ಬಾ prasannashreenivasa AMBONIDHI HRUDAYAMBARA VAASINI AMBAA BAA BAA. Show all posts

Sunday, 5 December 2021

ಅಂಬೋನಿಧಿ ಹೃದಯಂಬರಯ ವಾಸಿನಿ ಅಂಬಾ ಬಾ ಬಾ ankita prasannashreenivasa AMBONIDHI HRUDAYAMBARA VAASINI AMBAA BAA BAA



kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ರಮಾದೇವಿ


ಅಂಬೋನಿಧಿ ಹೃದಯಂಬರಯ ವಾಸಿನಿ

ಅಂಬಾ ಬಾ ಬಾ ಅಂಬುಧಿಜಾ ನಮೋ ಪ


ಅಂಬುಜನಾಭನ ನಿಜಸತಿ ಶ್ರೀ ಭೂ

ಅಂಭ್ರಣಿ ಚಾಮರ ವ್ಯಜನ ರಥಾಂಗ ಪೂ

ಕಂಬು ಮಾಲಾದಿ ಸುರೂಪದಿ ಹರಿಗೆ ನೀ

ಸಮ್ಮುದದಿಂದೆ ಸುಸೇವೆಯ ಮಾಳ್ಪಳೆ ಅ ಪ


ಮಂದರಗಿರಿಯಿಂದ ಸಿಂಧುವ ಮಥಿಸಲು

ನಿಂದು ಪ್ರಕಟವಾದೆ ಇಂದಿರಾದೇವಿಯೆ

ಕುಂದೇನಿಲ್ಲದ ಸುಂದರಗುಣನಿಧಿ

ಬಂಧಮೋಚಕ ಆನಂದಸುಪೂರ್ಣ ಗೋ

ವಿಂದ ಶ್ರೀ ಅಜಿತಭೂಮನನ್ನೆ ವರಿಸಿದೆ

ಮಂದಜಭವ ಶಿವ ವೃಂದಾರಕನುತ 1

ಹರನ ಚಾಪವ ಶ್ರೀರಾಮನು ಮುರಿಯಲು

ವರ ವನಮಾಲೆಯ ಅರ್ಪಿಸಿ ನಿಂದೆ

ಸುರಮುನಿರಾಜರು ಪುರಜನರೆಲ್ಲರು

ಸುರಿಯಲು ಪೂಮಳೆ ಸಂಭ್ರಮದಿಂದಲಿ

ಸರಿಪರರಿಲ್ಲದ ಶ್ರೀ ರಘುರಾಮನು

ಸಿರಿಜನಕಜೆ ನಿನ್ನ ಕರವನು ಗ್ರಹಿಸಿದ 2

ಭೈಷ್ಮಿ ರುಕ್ಮಿಣಿ ಸತ್ಯಭಾಮಾ ಶ್ರೀ ಭೂದೇವಿ

ವಾಮಚಿನ್ಮಯೆ ಶ್ರೀ ಸ್ವಾಮಿ ಕೃಷ್ಣನ ರಾಣಿ

ಹೇಮಗರ್ಭಾದಿ ಸಮಸ್ತ ಸುಜನರಿಗೆ

ರಮೆ ನಿನ್ನಯ ಸುಮಂದ ಕಟಾಕ್ಷವು

ಕಾಮಿತ ಫಲದವು ಮೋಕ್ಷಹೇತುವೆ ದೇವಿ

ನಮೋ ನಮೋ ಪ್ರಸನ್ನ ಶ್ರೀನಿವಾಸನ ಸತಿ 3

***